ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸರಿಗಮ ವಿಜಿ (72) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ವಿ.ಜಿ.ನಿಧನಕ್ಕೆ ಕನ್ನಡ ಚಿತ್ರರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕಳೆದೊಂದು ವಾರದಿಂದ ತೀವ್ರ ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನ್ಯುಮೋನಿಯಾಕ್ಕೆ ತುತ್ತಾಗಿದ್ದ ಅವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಸರಿಗಮ ವಿಜಿ ಸಾವಿಗೆ ಚಿತ್ರರಂಗ,ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.1980 ರಲ್ಲಿ ಗೀತಪ್ರಿಯಾ ನಿರ್ದೇಶನದ `ಬೆಳವಳದ ಮಡಿಲಲ್ಲಿ’ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ಸರಿಗಮ ವಿಜಿ ಚಿತ್ರರಂಗ ಪ್ರವೇಶ ಮಾಡಿದ್ದರು.
ಬೆಂಗಳೂರು ನಗರದ ಹೆಚ್‌ಎಎಲ್ ಬಳಿಯ ವಿಮಾನಪುರದಲ್ಲಿ ಅವರು ಹುಟ್ಟಿದರು. ತಂದೆ ರಾಮಯ್ಯ ಹೆಚ್‌ಎಎಲ್ ಉದ್ಯೋಗಿ ಆಗಿದ್ದರು. ಒಟ್ಟು ಐವರು ಮಕ್ಕಳಲ್ಲಿ ವಿಜಯ್ ಕುಮಾರ್ ಕೊನೆಯವರು. ಗ್ಯಾಸ್ಕಾಲೇಜಿನಲ್ಲಿ ಪಿಯುಸಿ ಓದುವಾಗ ನಟ ಅಶೋಕ್ ಜೊತೆ ಸೇರಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮಲ್ಲೇಶ್ವರಂ ಎAಇಎಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದರು.
ಸಂಸಾರದಲ್ಲಿ ಸರಿಗಮ ಎಂಬ ನಾಟಕದ ಮೂಲಕ ಪ್ರಸಿದ್ಧರಾಗಿದ್ದ ಆರ್.ವಿಜಯ್ ಕುಮಾರ್ ಸರಿಗಮ ವಿಜಿ ಎಂದೇ ಖ್ಯಾತರಾಗಿದ್ದರು. ರಂಗಭೂಮಿ ಸಕ್ರಿಯ ರಾಗಿದ್ದ ಸರಿಗಮ ವಿಜಿ ಅವರು ೨೬೯ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಳಿಕ ಸೀರಿಯಲ್‌ಗಳತ್ತ ನಟ ಸರಿಗಮ ವಿಜಿ ಮುಖಮಾಡಿದ್ದರು. ಜಯಂತಿ ಅವರ ‘ಏನ್ ಸ್ವಾಮಿ ಅಳಿಯಂದ್ರೆ’ ಚಿತ್ರಕ್ಕೂ ವಿಜಿ ಸಹಾಯಕರಾಗಿದ್ದರು. ಆ ಚಿತ್ರದಲ್ಲಿ ಅವರ ಕೆಲಸ ನೋಡಿ ಟೈಗರ್ ಪ್ರಭಾಕರ್ ಮೆಚ್ಚಿದರು. ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರು. ಮುಂದೆ ಏಳೆAಟು ಸಿನಿಮಾಗಳಲ್ಲಿ ಪ್ರಭಾಕರ್ ಜೊತೆ ಸಹಾಯಕರಾಗಿ ದುಡಿದು ಹಾಸ್ಯ ಪಾತ್ರಗಳಲ್ಲಿ ಸರಿಗಮ ವಿಜಿ ನಟಿಸುವಂತಾಯಿತು. ಓಂ ಪ್ರಕಾಶ್ ರಾವ್ ಬಳಿಯೂ ಸರಿಗಮ ವಿಜಿ ಸಹಾಯಕನಾಗಿ ಕೆಲಸ ಮಾಡಿದ್ದರು.
ಧಾರಾವಾಹಿ ನಿರ್ದೇಶನ ಮಾಡುವ ಜೊತೆಗೆ ನಟನೆ ಮಾಡಿದ್ದಾರೆ. ಸರಿಗಮ ವಿಜಿ ಹೆಚ್ಚಾಗಿ ನಟ ಟೈಗರ್ ಪ್ರಭಾಕರ್ ಅವರ ಚಿತ್ರಗಳಲ್ಲೇ ಕಾಣಿಸಿಕೊಂಡಿದ್ದರು.ಸರಿಗಮ ವಿಜಿ ಪಾರ್ಥೀವ ಶರೀರವನ್ನ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮಹಾಲಕ್ಷ್ಮಿ ಪುರಂದಲ್ಲಿರುವ ನಿವಾಸದಲ್ಲಿ ಕೊಂಡೊಯ್ಯಲಾಗುವುದು. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 10 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ನಾಳೆ ಬೆಳಗ್ಗೆ 10 ಗಂಟೆ ಸುಮಾರಿಗೆ ಚಾಮರಾಜಪೇಟೆಯ ಟಿ. ಆರ್ ಮಿಲ್ ಬಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುAಬಮೂಲಗಳು ತಿಳಿಸಿವೆ.