ಬೆಂಗಳೂರು : ಕನ್ನಡದ ನಟಿ ಭಾವನಾ ರಾಮಣ್ಣ ಗರ್ಭಿಣಿಯಾಗಿದ್ದಾರೆ. ಈ ವಿಷಯವನ್ನು ಖುದ್ದು ಅವರೇ ಬಹಿರಂಗಪಡಿಸಿದ್ದಾರೆ. ಅಂದ ಹಾಗೆ ಅವರು ಈವರೆಗೂ ಮದುವೆಯಾಗಿರಲಿಲ್ಲ. ಆದರೆ ಈಗ ಆಕೆ ಆರು ತಿಂಗಳ ಗರ್ಭಿಣಿ..! ಗರ್ಭಾವಸ್ಥೆಯಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಾನು ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿದ್ದಾರೆ.
ಭಾವನಾ ನಟನೆಯ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಕೆಲವು ತಿಂಗಳಿನಿAದ ನಟನೆಯಿಂದ ದೂರವಿದ್ದ ಭಾವನಾ, ಇದೀಗ ತಾನು ಗರ್ಭಿಣಿ ಎಂಬ ವಿಚಾರವನ್ನು ಹಂಚಿಕೊAಡಿದ್ದಾರೆ. `ತಾಯ್ತನದ ಆಸೆ ಇರಲಿಲ್ಲ. ‘ಹೊಸ ಅಧ್ಯಾಯ, ಹೊಸ ಲಯ, ನಾನು ಈ ವಿಚಾರ ಹೇಳುತ್ತೇನೆಂದು ನಾನು ಎಂದಿಗೂ ಊಹಿಸಿರಲಿಲ್ಲ. ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನ್ನ ೨೦ ಮತ್ತು ೩೦ರ ದಶಕದಲ್ಲಿ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. ಆದರೆ ನಾನು 40 ವರ್ಷ ತುಂಬಿದಾಗ ಆ ಆಸೆಯನ್ನು ನಿರಾಕರಿಸಲು ಆಗಲಿಲ್ಲ. ಒಂಟಿ ಮಹಿಳೆಯಾಗಿ ಈ ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಆಸ್ಪತ್ರೆಗಳು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸಿದವು’ ಎಂದು ಭಾವನಾ ಪೋಸ್ಟ್ ಮಾಡಿದ್ದಾರೆ.
`ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನೊಂದಿಗೆ ನಿಂತರು’ ಎAದೂ ಬರೆದುಕೊಂಡಿದ್ದಾರೆ.