Friday, November 22, 2024
Flats for sale
Homeರಾಜ್ಯಬೆಂಗಳೂರು ; ಎರಡು ದಿನದಿಂದ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಬೆಂಗಳೂರು ತತ್ತರ.

ಬೆಂಗಳೂರು ; ಎರಡು ದಿನದಿಂದ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಬೆಂಗಳೂರು ತತ್ತರ.

ಬೆಂಗಳೂರು ; ನೀರಿಲ್ಲದೆ ಬರಿದಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ದಿನದಿಂದ ಸುರಿಯುತ್ತಿರುವ ವರ್ಷಧಾರೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

200 ಕ್ಕೂ ಅಧಿಕ ಮರಗಳು, ರೆಂಬೆಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದರೆ, ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಮಳೆ ಸಂಬಂಧ ಅವಘಡಗಳಲ್ಲಿ ಮೂವರು ಗಾಯಗೊಂಡಿದ್ದಾರೆ.

ಮಳೆಯ ಜೊತೆಗೆ ವಿಪರೀತ ಗಾಳಿಯೂ ಸೇರಿರುವುದರಿಂದ ವಾಣಿಜ್ಯ ಮಳಿಗೆಗಳ ಬೋರ್ಡ್ ಗಳು ರಸ್ತೆಗೆ ಬಂದು ಬಿದ್ದರೆ, ಕೆಲವೆಡೆ ಅಂಡರ್ ಪಾಸ್ ನಲ್ಲಿ ನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ. ಇದರ ಜೊತೆಗೆ ಬೈಕ್, ಕಾರುಗಳಿಗೆ ಕೂಡ ಭಾರಿ ಹಾನಿ ಉಂಟಾಗಿದೆ. ಇಲ್ಲಿನ ಆರ್‌ಆರ್ ನಗರದಲ್ಲಿ ಓರ್ವ ಹಾಗೂ ಜಯನಗರದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎAಪಿ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ 38 ಪ್ರದೇಶಗಳಲ್ಲಿ ರಸ್ತೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಅವಾಂತರ ಸೃಷ್ಟಿಯಾಗಿವೆ. ಸದ್ಯ ರಸ್ತೆಗಳಲ್ಲಿ ನಿಂತಿದ್ದ ನೀರು ಖಾಲಿಯಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವು ಮಾಡಲಾಗುತ್ತಿದೆ. ರಾತ್ರಿ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿ ಜನರು ತತ್ತರಿಸಿ ಹೋಗಿದ್ದಾರೆ.

ಬೆಂಗಳೂರು ಹೊರ ವಲಯದ ಆನೇಕಲ್ ತಾಲ್ಲೂಕಿನಾದ್ಯಂತ ಜೋರು ಮಳೆಯಾಗಿದ್ದು, ಇಂದು ಮುಂಜಾನೆಯೂ ಮಳೆಯಾಗಿದೆ. ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಆನೇಕಲ್, ಚಂದಾಪುರ, ಹೆಬ್ಬಗೋಡಿ, ಎಲೆಕ್ಟಾçನಿಕ್ಸಿ ಟಿ ಸುತ್ತಮುತ್ತ ಜನರು ಪರದಾಟ ನಡೆಸುದ್ದಾರೆ. ನಿನ್ನೆ ಸಂಜೆಯೂ ಇದೇ ರೀತಿ ಆನೇಕಲ್ ತಾಲ್ಲೂಕಿನಲ್ಲಿ ಮಳೆ ಸುರಿದಿತ್ತು. ಭಾರೀ ಮಳೆಗೆ ಪಾದಚಾರಿಗಳು, ವಾಹನ ಸವಾರರು ಸಮಸ್ಯೆಗೆ ಸಿಲುಕಿದರು. ಬೆಳ್ಳಂದೂರಿನ ಪಾರ್ಟ್ಮೆಂಟ್ ನಲ್ಲಿ ಮಳೆ ಚರಂಡಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ವಿದ್ಯುತ್ಸಂ ಪರ್ಕ ಕಡಿತಗೊಂಡಿದೆ.

ಬೆಂಗಳೂರುಮೈಸೂರು ಹೆದ್ದಾರಿಯ ಬಸವನಪುರದ ಬಳಿ ನೀರು ಭಾರೀ ಪ್ರಮಾಣದಲ್ಲಿ ನಿಂತ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಸವಾರರು ಪರದಾಡಿದರು. ಅದರಲ್ಲೂ, ಬೆಂಗಳೂರುಮೈಸೂರು ದಶಪಥ ಹೆದ್ದಾರಿ ತುಂಬಿ ಹರಿಯುತ್ತಿದ್ದು, ಹೆದ್ದಾರಿಯಲ್ಲಿ ನೀರು ನಿಂತ ಹಿನ್ನಲೆ ಸುಮಾರು ೫ ಕಿಲೋ ಮೀಟರ್ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ವೀಕೆಂಡ್ ಪರಿಣಾಮ ಭಾರೀ ಸಂಖ್ಯೆಯ ವಾಹನ ಸವಾರರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು. ಆದರೆ ದಿಢೀರ್ ಮಳೆ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು
ಹೈರಾಣಾಗಿದ್ದಾರೆ.

ಬಾರಿ ಮಳೆ ಗಾಳಿಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಬೃಹತ್ ಗಾತ್ರದ ಮರ ಬಿದ್ದಿರುವ ಘಟನೆ ನಡೆದಿದೆ. ಪಾನಿಪುರಿ ಅಂಗಡಿ, ಬೈಕ್ ಗಳ ಮೇಲೆ ಮರ ಬಿದ್ದು, 10 ಕ್ಕೂ ಹೆಚ್ಚು ಬೈಕ್ ಗಳು ಜಖಂ ಆಗಿವೆ. ಬೃಹತ್ ಗಾತ್ರದ ಮರ ಬುಡ ಸಮೇತ ಧರೆಗುರುಳಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಾರ್ವಜನಿಕರು ಪಾರಾಗಿದ್ದಾರೆ. ಪೀಣ್ಯಾದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಕಾರಿನಲ್ಲಿ ಸಿಲುಕಿದ ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬನ್ನೇರುಘಟ್ಟ ವೆಗಾ ಸಿಟಿ ಮಾಲ್ ಬಳಿಯೂ ಮರ ಬಿದ್ದಿದೆ. ಇದುವರೆಗೂ
ಯಾವುದೇ ಪ್ರಾಣಾಪಾಯದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕೆಲವೆಡೆ ರಸ್ತೆ ಬದಿ ನಿಂತ ವಾಹನ ಮಳೆ
ನೀರಲ್ಲಿ ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular