Wednesday, October 22, 2025
Flats for sale
Homeರಾಜ್ಯಬೆಂಗಳೂರು : ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಲು ವಾಹನ ಮಾಲೀಕರು ನಿರ್ಲಕ್ಷ್ಯ,ಫೆಬ್ರವರಿ 17 ರವರೆಗೆ ಗಡುವು,ಇನ್ನೂ 1.88...

ಬೆಂಗಳೂರು : ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಲು ವಾಹನ ಮಾಲೀಕರು ನಿರ್ಲಕ್ಷ್ಯ,ಫೆಬ್ರವರಿ 17 ರವರೆಗೆ ಗಡುವು,ಇನ್ನೂ 1.88 ಕೋಟಿ ವಾಹನ ಬಾಕಿ.

ಬೆಂಗಳೂರು : ವಾಹನಗಳ ಫಲಕಗಳ ಬದಲಾವಣೆಗೆ ಫೆಬ್ರವರಿ 17 ರವರೆಗೆ ಗಡುವು ನೀಡಲಾಗಿದೆ. ಆದರೆ, ಇದುವರೆಗೆ 12 ಲಕ್ಷ ವಾಹನಗಳು ಮಾತ್ರ ಅಳವಡಿಸಿಕೊಂಡಿವೆ.ಇನ್ನೂ 1.88 ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸುವುದು ಬಾಕಿ ಇದೆ. 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿ ಯಾದ ವಾಹನಗಳಿಗೆ ಕಡ್ಡಾಯವಾಗಿ ಅತಿ ಹೆಚ್ಚು ಭದ್ರತೆಯುಳ್ಳ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವಂತೆ ಸಾರಿಗೆ ಇಲಾಖೆ ಸೂಚಿಸಿತ್ತು. 2023ರ ನವೆಂಬರ್ 17 ರವರೆಗೆ ಕಾಲಾವಕಾಶ ನೀಡಿತ್ತು.

ಜನ ಸ್ಪಂದಿಸದ ಕಾರಣ ಹಳೆ ಫಲಕ ಬದಲಿಸಲು ಫೆಬ್ರವರಿ 17 ರವರೆಗೆ ಗಡುವು ವಿಸ್ತರಿಸಲಾಗಿತ್ತು. ರಾಜ್ಯದಲ್ಲಿ 2019ರ ಏಪ್ರಿಲ್ 1 ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು 2 ಕೋಟಿಯಷ್ಟಿದೆ. ಈ ವಿಷಯವಾಗಿ ವಾಹನ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿರುವುದು ಒಂದಾದರೆ, ಫಲಕ ಬದಲಾವಣೆಗೆ ಆಸಕ್ತಿ ತಾಳಿದರೂ ಸರ್ವರ್ ಡೌನ್ ಎಂಬ ಕಾರಣದಿಂದ ನೋAದಣಿ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ಸಾಕಷ್ಟು ಕಾಲಾವಕಾಶ ನೀಡಿದರೂ ವಾಹನ ಮಾಲೀಕರು ಆಸಕ್ತಿ ತಾಳದೆ ಕೊನೆ ಹಂತದಲ್ಲಿ ನೋಂದಣಿಗೆ ಮುAದಾಗುತ್ತಿದ್ದಾರೆ. ಇದರಿಂದ ತಾAತ್ರಿಕ ಸಮಸ್ಯೆ ಎದುರಾಗುತ್ತಿದೆ.

ನಕಲಿಗೆ ಅವಕಾಶವಿಲ್ಲ: ಯಾವುದೇ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೋಗ್ರಾಮ್, ಐಎನ್‌ಡಿ ಮಾರ್ಕ್, ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ ಎಚ್‌ಎಸ್‌ಆರ್‌ಪಿ ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು ನಕಲಿ ಪ್ಲೇಟ್‌ಗಳಾಗಿರುತ್ತವೆ. ಅಧಿಕೃತ ಎಚ್‌ಎಸ್‌ಆರ್‌ಪಿ ನಂಬರ್ಪ್ಲೇ ಟ್ ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ.

ಗಡುವು ವಿಸ್ತರಣೆ, ದಂಡ? ಎಚ್‌ಎಸ್‌ಆರ್‌ಪಿ ಅಳವಡಿಕೆ ನೀಡಲಾಗಿದ್ದ ಗಡುವು ಇನ್ನೊಂದು ವಾರದಲ್ಲಿ ಮುಗಿಯಲಿದೆ. ಆದರೆ, ನಿಗದಿಯಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿಲ್ಲದ ಕಾರಣ ಮತ್ತೊಮ್ಮೆ ಗಡುವು ವಿಸ್ತರಿಸುವ ಕುರಿತು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಒಂದು ವೇಳೆ ಗಡುವು ವಿಸ್ತರಿಸದಿದ್ದರೆ ಫೆ.17 ರಿಂದ ವಾಹನಗಳಿಗೆ 1 ಸಾವಿರ ರೂಪಾಯಿಯಿಂದ 2 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular