ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ಮಧ್ಯೆ ಮತ್ತೆ ಜಟಾಪಟಿ ಆರಂಭವಾಗಿದೆ. ರವಿವಾರ ಬೆಳಗ್ಗೆ ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಸಾರ್ವಜನಿಕರ ಜತೆ ಸಂವಾದ ನಡೆಸಲು ಸಜ್ಜಾಗಿದ್ದರು.
ಆರ್‌ಎಸ್‌ಎಸ್ ಸಮವಸ್ತçದಲ್ಲಿ ಕುಳಿತಿದ್ದ ಶಾಸಕ ಮುನಿರತ್ನ ಅವರಿಗೆ ಏಯ್ ಕರಿಟೋಪಿ ಎಂಎಲ್‌ಎ ಬಾ ಇಲ್ಲಿ ಎಂದು ಆಹ್ವಾನಿಸಿದರು. ವೇದಿಕೆ ಮೇಲೆ ಹೋದ ಮುನಿರತ್ನ ಡಿ.ಕೆ. ಶಿವಕುಮಾರ್ ಕೈಯಲ್ಲಿದ್ದ ಮೈಕ್ ಇಸಿದುಕೊಂಡು ಇದು ಸಾರ್ವಜನಿಕ ಕಾರ್ಯಕ್ರಮ ಅಲ್ಲ.ಶಾಸಕನಾದ ನನ್ನನ್ನು ಆಹ್ವಾನಿಸಿಲ್ಲ, ಎಂಪಿ ಫೋಟೋ ಇಲ್ಲ ಇದು ಸರಿಯೇ ಎಂದು ಜಿಬಿಎ ಆಯುಕ್ತರನ್ನು ಪ್ರಶ್ನಿಸಿದರು. ಈ ಕಾರ್ಯಕ್ರಮವನ್ನು ನಾನು ಪ್ರತಿಭಟಿಸುತ್ತೇನೆ ಎಂದು ವೇದಿಕೆಯಿಂದ ಇಳಿದು ಮುಂದೆ ನೆಲದ ಮೇಲೆ ಕುಳಿತರು.
ಜಿಬಿಎ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಗಣವೇಶದಲ್ಲಿ ಆಗಮಿಸಿದ್ದ ಶಾಸಕ ಮುನಿರತ್ನ ಬಂದಿದ್ದು ಮುನಿರತ್ನ ಅವರನ್ನು ಕರಿಟೋಪಿ ಎಂಎಲ್‌ಎ ಬಾ ಎಂದು ಡಿಸಿಎಂ ಶಿವಕುಮಾರ್ ಕರೆದಿದ್ದಾರೆ. ಇದನ್ನು ಪ್ರತಿಭಟಿಸಿದ ಮುನಿರತ್ನ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಘೋಷಣೆ ಕೂಗಿದ್ದಾರೆ. ಕರಿ ಟೋಪಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತೆಸೆದಕ್ಕೆ ಪ್ರತಿಭಟಿಸಿದ ಮುನಿರತ್ನಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ.
ಕಾರ್ಯಕ್ರಮದ ನಿರೂಪಕರು ಮತ್ತೊಮ್ಮೆ ಮುನಿರತ್ನ ಅವರನ್ನು ಸ್ವಾಗತಿಸಿ ವೇದಿಕೆಗೆ ಕರೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನಿರತ್ನ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಜಟಾಪಟಿ ನಡೆದು, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಶಾಸಕ ಮುನಿರತ್ನ ಅವರನ್ನು ಕಾರ್ಯಕ್ರಮದ ವೇದಿಕೆಯಿಂದ ಹೊರಗೆ ಕರೆದೊಯ್ದರು. ಇದೇ ವೇಳೆ ನೂಕುನುಗ್ಗಲು ಸಂಭವಿಸಿ ಆರೆಸ್ಸೆಸ್ ಟೋಪಿಯನ್ನು ಕಿತ್ತೆಸೆಯಲಾಯಿತು. ಬಳಿಕ ಮುನಿರತ್ನ ಅವರು ಜೆ.ಪಿ. ಪಾರ್ಕ್ನಲ್ಲೇ ಏಕಾಂಗಿಯಾಗಿ ಧರಣಿ ನಡೆಸಿದರು.