ಬೆಂಗಳೂರು : ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆಯ ಮಹಾಪೂರವೇ ಆಗುತ್ತಿದ್ದು, ಮೊದಲ ದಿನವೇ 4 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಗಳು ಆಗಿದ್ದು, 2ನೇ ದಿನವಾದ ಇಂದೂ ಸಹ ಬಂಡವಾಳ ಹೂಡಿಕೆದಾರರು ರಾಜ್ಯದಲ್ಲಿ ಲಕ್ಷಾಂತರ ರೂ. ಬಂಡವಾಳ ಹೂಡುವ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಇನ್ವೆಸ್ಟ್ ಕರ್ನಾಟಕದ ಈ ಸಮಾವೇಶದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಪರಸ್ಪರ ಸಭೆಗಳನ್ನು ನಡೆಸಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಿದ್ದು, ಟಿವಿಎಸ್ ಕಂಪನಿ ರಾಜ್ಯದಲ್ಲಿ 2 ಸಾವಿರ ಕೋಟಿ ರೂ.ನ್ನು ಮುಂದಿನ 5 ವರ್ಷಗಳಲ್ಲಿ ಹೂಡಿಕೆ ಮಾಡಲಿದೆ. ಈ ಸಮಾವೇಶದಲ್ಲಿ ಜೆಎಸ್‌ಡಬ್ಲುö್ಯ, ಮಹಿಂದ್ರ ಅಂಡ್ ಮಹೀಂದ್ರ,ಬಲ್ಟೊಟಾ,ಯುರೋಪ್ ಫ್ಯೂಚರ್ ಸೇರಿದಂತೆ ಹಲವು ಕಂಪನಿಗಳು ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಬಂಡವಾಳ ಹೂಡಲಿವೆ.
ಹಸಿರು ಇಂಧನ ವಲಯದಲ್ಲಿ ಹೆಚ್ಚಿನ ಹೂಡಿಕೆಗಳು ಆಗುತ್ತಿರುವುದು ವಿಶೇಷ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಎಲ್ಲದರ ಬಗ್ಗೆಯೂ ಇನ್ವೆಸ್ಟ್ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅನುಕೂಲಕರ ಅಂಶಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡುವ ಸಭೆಗಳು, ವಿಚಾರ ಸಂಕಿರಣಗಳು ನಡೆದಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಲು ಬಹುತೇಕ ಉದ್ದಿಮೆದಾರರು ಮನಸ್ಸುಮಾಡಿದ್ದು, ಅದಕ್ಕೆ ಸಂಬAಧಿಸಿದAತೆ ಒಪ್ಪಂದಗಳು, ಒಡAಬಡಿಕೆಗಳಿಗೆ ಇಂದೂ ಸಹ ಸಹಿ ಹಾಕಲಾಗಿದೆ.