Tuesday, October 21, 2025
Flats for sale
Homeರಾಜ್ಯಬೆಂಗಳೂರು : ಇನ್ಫೋಸಿಸ್ ನ ಶೌಚಾಲಯದಲ್ಲಿ ರಹಸ್ಯವಾಗಿ ಮಹಿಳೆಯ ವಿಡಿಯೋ ಮಾಡುತ್ತಿದ್ದ ಟೆಕ್ಕಿಯ ಬಂಧನ..!

ಬೆಂಗಳೂರು : ಇನ್ಫೋಸಿಸ್ ನ ಶೌಚಾಲಯದಲ್ಲಿ ರಹಸ್ಯವಾಗಿ ಮಹಿಳೆಯ ವಿಡಿಯೋ ಮಾಡುತ್ತಿದ್ದ ಟೆಕ್ಕಿಯ ಬಂಧನ..!

ಬೆಂಗಳೂರಿನ : ಇನ್ಫೋಸಿಸ್ ಕಚೇರಿಯ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಯ ವಿಡಿಯೋ ರಹಸ್ಯವಾಗಿ ಸೆರೆ ಹಿಡಿಯುತ್ತಿದ್ದ ಕೀಚಕನನ್ನು ಎಲೆಕ್ಟಾçನಿಕ್ಸ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಅಂದ್ರಪ್ರದೇಶ ಮೂಲದ ನಾಗೇಶ್ ಮಲಿ (೨೮) ಬಂಧಿತ ಆರೋಪಿಯಾಗಿದ್ದು ಎಲೆಕ್ಟಾçನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಯ ವಿಡಿಯೋ ರೆಕಾರ್ಡ್ ಮಾಡುವಾಗಲೇ ಆರೋಪಿಯು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರಹಸ್ಯವಾಗಿ ತನ್ನ ಮೊಬೈಲ್‌ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ಪ್ರತಿಬಿಂಬ ಮೂಡಿದೆ. ಕೂಡಲೇ ಹೊರ ಬಂದು ನೋಡಿದಾಗ ಯುವತಿ ಮಾತ್ರ ಕಂಡಿದ್ದಾಳೆ. ಮತ್ತೆ ಶೌಚಾಲಯದ ಒಳ ಹೋಗಿ ಆಕೆ ಪರಿಶೀಲನೆ ಮಾಡಿದ್ದಾರೆ. ಆಗ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಈ ವೇಳೆ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್‌ಆರ್ ಸಿಬ್ಬಂದಿ ಬಂದು ಪರಿಶೀಲಿಸಿದಾಗ ೩೦ಕ್ಕೂ ಅಧಿಕ ಮಹಿಳೆಯರ ವಿಡಿಯೋ ಇದರಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular