Tuesday, July 1, 2025
Flats for sale
Homeಕ್ರೈಂಬೆಂಗಳೂರು : ಇನ್ನೂ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರಿಗೆ ಏಳು ವರ್ಷ ಜೈಲು...

ಬೆಂಗಳೂರು : ಇನ್ನೂ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರಿಗೆ ಏಳು ವರ್ಷ ಜೈಲು ವಾಸ ಶಿಕ್ಷೆ ಗ್ಯಾರಂಟಿ..!

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುವವರನ್ನು ಕಾನೂನಿನ ಚೌಕಟ್ಟಿನೊಳಗೆ ಶಿಕ್ಷೆಗೆ ಗುರಿ ಪಡಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಈ ಸಂಬAಧ ಹೊಸ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ.

ಸರ್ಕಾರ ಉದ್ದೇಶಿಸಿರುವ ಕರ್ನಾಟಕ ಮಿಸ್ ಇನ್‌ಫ್ರರ್ಮೇಷನ್ ಅಂಡ್ ಫೇಕ್ ನ್ಯೂಸ್ (ನಿಯಂತ್ರಣ) ಕಾಯ್ದೆಯ ಕರಡು ಸಿದ್ಧವಾಗಿದ್ದು ಅದರನ್ವಯ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸುವವರು, ಜನರನ್ನು ದಾರಿ ತಪ್ಪಿಸುವವರಿಗೆ ಬರೋಬ್ಬರಿ ಏಳು ವರ್ಷಗಳವರೆಗೆ ಶಿಕ್ಷೆಯಾಗಲಿದೆ. ಇದರೊಟ್ಟಿಗೆ ಹತ್ತು ಲಕ್ಷ ರೂಪಾಯಿಯಷ್ಟು ದಂಡವನ್ನೂ ತೆತ್ತಬೇಕಾಗುತ್ತದೆ. ಉದ್ದೇಶಿತ ಕಾಯ್ದೆಯು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.

ಪ್ರಸ್ತಾಪಿತ ಕರಡಿನಲ್ಲಿ ಫೇಕ್ ನ್ಯೂಸ್ ಇಲ್ಲವೆ ಸುಳ್ಳು ಸುದ್ದಿಯನ್ನು `ವ್ಯಕ್ತಿಯೊಬ್ಬನ ಹೇಳಿಕೆಯನ್ನು ತಪ್ಪಾಗಿ ಉದ್ದರಿಸುವುದು ಅಥವಾ ಸುಳ್ಳು ಇಲ್ಲವೆ ನಿಖರವಲ್ಲದ ವರದಿ ಮಾಡುವುದು, ಮಾತಿನ ಆಡಿಯೋ ಇಲ್ಲವೇ ವಿಡಿಯೋ ಅನ್ನು ತಮಗೆ ಬೇಕಾದಂತೆ ಸಂಕಲಿಸುವುದು (ಎಡಿಟಿಂಗ್) ಮಾಡುವುದರಿAದ ಸತ್ಯಕ್ಕೆ ದೂರವಾದ ಸಂಗತಿಗಳು, ತಿರುಚಿದ ವಿಚಾರಗಲು ಜನಸಾಮಾನ್ಯರಿಗೆ ತಲುಪಿ ದಾರಿ ತಪ್ಪಿಸುವ ಕಾರ್ಯವಾಗುತ್ತದೆ’ ಎಂದು ವಿಶ್ಲೇಷಿಸಲಾಗಿದೆ.

ಗೊತ್ತಿದ್ದೋ? ಬೇಕಾಬಿಟ್ಟಿಯಾಗಿಯೋ?
ಸುಳ್ಳು ಇಲ್ಲವೆ ನಿಖರವಲ್ಲದ ಹೇಳಿಕೆಯನ್ನು ಬಿತ್ತರಿಸುವುದು, ಉದ್ದರಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು ಇಂತಹ ಸುಳ್ಳು ಸುದ್ದಿಗಳು ಪೂರ್ವಾಗ್ರಹಪೀಡಿತವಾಗಿದ್ದು ಸಾರ್ವಜನಿಕಆರೋಗ್ಯ, ಸಾರ್ವಜನಿಕರ ಭದ್ರತೆ ಮತ್ತು ಸಾರ್ವಜನಿಕರ ಅಸಹಾಯಕತೆ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆಯಿರುತದೆ. ಇಂತಹ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಢಿದವರಿಗೆ ಎರಡದಿಂದ ಐದು ವರ್ಷಗಳ ಕಾರಾಗೃಹ ಶಿಕ್ಷೆಗೆ ಅರ್ಹರಾಗಿರುತ್ತಾರೆ. ಸುಳ್ಳು ಸುದ್ದಿಯ ಹಂಚುವಿಕೆಗೆ ಎರಡು ವರ್ಷ ಕಾರಾಗೃಹ ಶಿಕ್ಷೆಯಿದ್ದು ಒಟ್ಟು ಏಳು ವರ್ಷಗಳವರೆಗೆ ಸೆರೆವಾಸ ಅನುಭವಿಸಬೇಕಾಗುತ್ತದೆ.

ಈ ಪ್ರಕರಣದಲ್ಲಿ ಅಪಪ್ರಚಾರಕರಿಗೆ ಹತ್ತು ಲಕ್ಷ ರೂಪಾಯಿ ದಂಡ,ಸನಾತನ ಧರ್ಮ ನಿಂದಕರಿಗೂ ಉಂಟು ಶಿಕ್ಷೆ,ಮಹಿಳೆಯರಿಗೆ ಅಪಮಾನ ಮಾಡಿದರೂ ಶಾಸ್ತಿ, ಸ್ತಿçà ನಿಂದಕ/ಪೀಡಕರಿಗೂ ಶಿಕ್ಷೆ ಉದ್ದೇಶಿತ ವಿಧೇಯಕವು ಸ್ತಿçà ವಾದದ ವಿರೋಧವೂ ಸೇರಿದಂತೆ ಹೆಣ್ಣು ಮಕ್ಕಳ ನಿಂದನೆ, ಅವಾಚ್ಯ ಪದ ಬಳಕೆಯನ್ನು ನಿಷೇಧಿಸುತ್ತದೆ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮಕ್ಕೆ ಅಗೌರವ ತರುವಂತಹ ಹೇಳಿಕೆ/ವಿಚಾರಧಾರೆಯನ್ನು ಪೋಸ್ಟ್ ಮಾಡುವುದನ್ನೂ ನಿಷೇಧಿಸಲು ಉದ್ದೇಶಿಸಿದೆ. ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಧರ್ಮ, ತತ್ವಶಾಸ್ತç ಮತ್ತು ಸಾಹಿತ್ಯದ ಕುರಿತ ಸಂಶೋಧಿತ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular