ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ)ಲಡ್ಡು ತಯಾರಿಕೆಗೆ ಕರ್ನಾಟಕ ರಾಜ್ಯದಿಂದ ಪೂರೈಕೆಯಾಗುತ್ತಿದ್ದ ತುಪ್ಪದ ಟೆಂಡರ್ ಎರಡನೇ ಬಾರಿಯೂ ಕೈ ತಪ್ಪಿದೆ.ಇದರಿಂದ ಪ್ರಸಿದ್ಧ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪದ ಪರಿಮಳ ಇಲ್ಲದಂತಾಗಿದೆ.
ಲಡ್ಡು ಪ್ರಸಾದಕ್ಕೆ ಕೆಎಂಎಫ್ ತುಪ್ಪ ಪೂರೈಸಿಲ್ಲ ಎಂಬ ಕಾರಣ ನೀಡಿ ಈ ಹಿಂದೆ ತುಪ್ಪವನ್ನು ಟಿಟಿಡಿ ಸ್ಥಗಿತಗೊಳಿಸಿತ್ತು.ಈ ವಿಚಾರ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಭಾರಿ ಚರ್ಚೆಯಾತ್ತು, ಈಗ ಮತ್ತೆ ಟೆಂಡರ್ ಕೈ ತಪ್ಪಿರುವುದು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಮಾಡಿದೆ. ವರ್ಷಕ್ಕೆ ಎರಡು ಬಾರಿ ತುಪ್ಪ ಆಮದಿಗಾಗಿ ಟಿಟಿಡಿ ಟೆಂಡರ್ನ್ನು ಕರೆಯುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇತ್ತೀಚೆಗೆ ಸಲ್ಲಿಸಿರುವ ಟೆಂಡರ್ನ್ನು ಮತ್ತೇ ತಿರಸ್ಕರಿಸಲಾಗಿದೆ. ಎಷ್ಟೇ ಪ್ರಯತ್ನಿಸಿದರು ತಿಮ್ಮಪ್ಪನಿಗೆ ನಂದಿನಿ ತುಪ್ಪ ತಲುಪದಂತಾಗಿದೆ. ಕಳೆದ ಬಾರಿಗಿಂತ ಕಡಿಮೆ ಬಿಡ್(ದರ)ಗೆ ಟೆಂಡರ್ನ್ನು ಬೇರೆ ರಾಜ್ಯಕ್ಕೆ ನೀಡಲಾಗಿದೆ ಎಂದು ತಿರುಪತಿ ದೇವಸ್ಥಾನ ಮಂಡಳಿ ಸ್ಪಷ್ಟಪಡಿಸಿದೆ.
ಟೆಂಡರ್ ಎಷ್ಟು? ಏನು?:
ಆರು ತಿಂಗಳ ಅವಧಿಗೆ ಸಾವಿರಾರು ಟನ್ ತುಪ್ಪಕ್ಕೆ ಟಿಟಿಡಿ ಟೆಂಡರ್ ಕರೆಯುತ್ತದೆ. ಎರಡನೇ ಬಾರಿಯ ಟೆಂಡರ್ನಲ್ಲಿ ಕೆಎಂಎಫ್ ಕೆ.ಜಿ.ಗೆ ೫೫೦ ರೂ.ಗೆ ಬಿಡ್ ಸಲ್ಲಿಸಿತ್ತು. ಆದರೆ, ಟಿಟಿಡಿ ನಂದಿನಿ ತುಪ್ಪದ ದರಕ್ಕಿಂತ ಕಡಿಮೆ ದರಕ್ಕೆ ಅಂದರೆ ೩೬೦ ರೂ.ಗೆ ಬಿಡ್ ಮಾಡಿರುವ ಬೇರೆ ರಾಜ್ಯದ ಕಂಪೆನಿಗೆ ಟೆಂಡರ್ನೀ ಡಲಾಗಿದೆ ಎಂದು ಹೇಳಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಕೆಎಂಎಫ್ಗೆ ತಿರುಪತಿ ಲಡ್ಡು ಪ್ರಸಾದದ ಟೆಂಡರ್ ಕೈ ತಪ್ಪುತ್ತಾ ಹೋಗುತ್ತಿದೆ. ಟೆಂಡರ್ನಲ್ಲಿ ಟಿಟಿಡಿ ಪರಿಶೀಲಿಸುವ ಎಲ್ಲ ಪ್ರಕ್ರಿಯೇಯಲ್ಲಿ ಪಾಸಾಗಿತ್ತು.ಆದರೆ ದರ ವಿಚಾರದ ಕೊನೆಯಲ್ಲಿ ಹಿನ್ನಡೆಯಾಗಿದೆ. ಟೆಂಡರ್ ಕರೆದಾಗೊಮ್ಮೆ ಕೆಎಂಎಫ್ ಟೆಂಡರ್ ಹಾಕುತ್ತಿದ್ದರೂ ಪ್ರಯೋಜನವಾಗದಂತಾಗಿದೆ.


