ಬೆಂಗಳೂರು ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಿವೀಸ್ 3ನೇ ದಿನ ಅದ್ಭುತ ಪ್ರದರ್ಶನ ನೀಡಿದೆ. 134 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ಕಿವೀಸ್ ಮುಂದಿನ 99 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ ಜೋಡಿ ಸ್ಪೋಟಕ ಪ್ರದರ್ಶನ ನೀಡಿತು.
132 ಎಸೆತಗಳಲ್ಲಿ ಈ ಜೋಡಿ 137 ರನ್ ಸಿಡಿಸಿತ್ತು. ಬಳಿಕ ವೇಗಿ ಮೊಹಮ್ಮದ್ ಸಿರಾಜ್ ಟಿಮ್ ಸೌಥಿ ಅವರನ್ನು ಪೆವಿಲಿಯನ್‌ಗಟ್ಟುವ ಮೂಲಕ ಇವರಿಬ್ಬರ ಆರ್ಭಟಕ್ಕೆ ಬ್ರೇಕ್ ಹಾಕಿದರು. ಆದ್ರೆ ಕೊನೆಯವರೆಗೂ ಹೋರಾಡಿದ ರಚಿನ್ ರವೀಂದ್ರ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾದರು.
ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪರ ರಚಿನ್ ರವೀಂದ್ರ ಭರ್ಜರಿ 137 ರನ್ (157 ಎಸೆತ, 13 ಬೌಂಡರಿ, 4 ಸಿಕ್ಸರ್) ಚಚ್ಚಿದರು. ಇನ್ನುಳಿದಂತೆ ಡಿವೋನ್ ಕಾನ್ವೆ 91 ರನ್ (105 ಎಸೆತ, 3 ಸಿಕ್ಸರ್, 11 ಬೌಂಡರಿ), ಟಿಮ್ ಸೌಥಿ 65 ರನ್ (73 ಎಸೆತ, 5 ಬೌಂಡರಿ, 4 ಸಿಕ್ಸರ್), ವಿಲ್ ಯಂಗ್ 33 ರನ್, ಟಾಮ್ ಲಾಥಮ್ 15 ರನ್, ಡೇರಿಲ್ ಮಿಚೆಲ್ 18 ರನ್, ಗ್ಲೆನ್ ಫಿಲಿಪ್ಸ್ 14 ರನ್, ಮ್ಯಾಟ್ ಹೆನ್ರಿ 8 ರನ್, ಆಜಾಜ್ ಪಟೇಲ್ 4 ರನ್, ಟಾಮ್ ಬ್ಲಂಡೆಲ್ 5 ರನ್ ಗಳಿಸಿದ್ರೆ, ವಿಲಿಯಂ ಒ ರೂರ್ಕಿ ರನ್ ಗಳಿಸದೇ ಕ್ರೀಸ್‌ನಲ್ಲಿ ಉಳಿದರು.
46ಕ್ಕೆ ನೆಲಕಚ್ಚಿದ್ದ ಭಾರತ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ತವರಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ 3ನೇ ಅತೀ ಕಡಿಮೆ ರನ್ ಗಳಿಸಿದ ಕೆಟ್ಟ ದಾಖಲೆಯನ್ನೂ ಹೆಗಲಿಗೇರಿಸಿಕೊಂಡಿತು. ಇದನ್ನೂ ಓದಿ: ಕಿವೀಸ್ ವೇಗಿಗಳ ಆರ್ಭಟ; 46ಕ್ಕೆ ಭಾರತ ಆಲೌಟ್ – ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ಟೀಂ ಇಂಡಿಯಾ
ಟೀಂ ಇಂಡಿಯಾ ಕಳಪೆ ರನ್ ಗಳಿಸಿದ ಪಂದ್ಯಗಳು
- 36 ರನ್ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್ ಮೈದಾನ (2020)
- 42 ರನ್ – ಇಂಗ್ಲೆಂಡ್ ವಿರುದ್ಧ – ಲಾರ್ಡ್ಸ್ ಮೈದಾನ (1974
- 46 ರನ್ – ನ್ಯೂಜಿಲೆಂಡ್ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
- 58 ರನ್ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್(1952)
- 66 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್ ಮೈದಾನ (1996)
ಸಂಕ್ಷಿಪ್ತ ಸ್ಲೋರ್:
ಮೊದಲ ಇನ್ನಿಂಗ್ಸ್
ಭಾರತ – 46/10
ನ್ಯೂಜಿಲೆಂಡ್ – 402/10