ಬೆಂಗಳೂರು : ಇಡ್ಲಿ, ಹಸಿರು ಬಟಾಣಿ, ಕಲ್ಲಂಗಡಿ ಬಳಿಕ ಇದೀಗ ಬೆಲ್ಲ ಹಾಗೂ ಟೊಮೆಟೊ ಸಾಸ್ ಕೂಡಾ ಸೇವನೆಗೆ ಅಸುರಕ್ಷಿತ ಎಂಬ ಅಂಶ ಬಯಲಾಗಿದೆ. ಬೆಲ್ಲ ಹಾಗೂ ಟೊಮೆಟೊ ಸಾಸ್‌ಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಆಹಾರ ಇಲಾಖೆ ಕಳು ಹಿಸಿತ್ತು. ಈ ಎರಡೂ ವಸ್ತುಗಳನ್ನು ಪ್ರಯೋಗಗಾಲಯದಲ್ಲಿ ಪರೀಕ್ಷೆ ಮಾಡಿಸಿದಾಗ, ವರದಿಯಲ್ಲಿ ಬೆಲ್ಲ ಅಸುರಕ್ಷಿತ ಎಂದು ಗೊತ್ತಾಗಿದೆ ಬೆಲ್ಲದ ಮಾದರಿಯನ್ನು ಫೆಬ್ರವರಿ ತಿಂಗಳಿನಲ್ಲೇ ಪ್ರಯೋಗಾಲಯಕ್ಕೆ ಕಳುಹಿಸಲಾಗಿತು.
ಒಟ್ಟು 600 ಕ್ಕೂ ಹೆಚ್ಚು ಮಾದರಿಗಳನ್ನು ಈ ವೇಳೆ ಪರೀಕ್ಷಿಸಲಾಗಿತ್ತು. ಈ ವೇಳೆ 200 ಕ್ಕೂ ಹೆಚ್ಚು ಬೆಲ್ಲ ಅಸುರಕ್ಷಿತ ಎಂದು ವರದಿಯಲ್ಲಿ ದೃಢವಾಗಿದೆ. ಬೆಲ್ಲದಲ್ಲಿ ಸಲ್ಫಾರ್ ಡೈಆಕ್ಸೈಡ್ ರಾಸಾಯನಿಕ ಬಳಕೆ ಮಾಡುತ್ತಿರುವ ಪತ್ತೆಯಾಗಿದೆ. ಇಂತಹ ಬೆಲ್ಲ ಸೇವನೆಯಿಂದ ಮೂಳೆ, ನಗರಗಳಲ್ಲಿ ಶಕ್ತಿ ಕಡಿಮೆ ಆಗುತ್ತದೆ. ಸಲ್ಫಾರ್ಡೈ ಡೈಆಕ್ಸೈಡ್ ನಿಂದ ಮನುಷ್ಯನಲ್ಲಿ ನಿಶಕ್ತಿ ಕಾಣಿಸಿಕೊಳ್ಳುತ್ತದೆ. ಮಂಡಿ ನೋವು, ಸೊಂಟ ಮತ್ತು ಬೆನ್ನು ನೋವು ಹೆಚ್ಚಾಗುತ್ತದೆ. ಅಲ್ಲದೇ ಮನುಷನ ದೇಹದಲ್ಲಿ ವಿವಿಧ ಆರೋಗ್ಯದ ಸಮಸ್ಯೆ ಕಂಡು ಬರುತ್ತದೆ. ಈ ಬೆಲ್ಲ ತಿಂದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಗೊತ್ತಾಗಿದೆ.
ಹಾಗೆಯೇ ಟೊಮೆಟೊ ಸಾಸ್ ಸೇವನೆಗೆ ಯೋಗ್ಯವೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಇದರ ಮಾದರಿಯನ್ನು ಪರೀಕ್ಷೆ ಮಾಡಿದಾಗ ಅದು ಅಸುರಕ್ಷಿತ ಎಂದು ಗೊತ್ತಾಗಿದೆ. ಪ್ರಯೋಗಾಲಯಕ್ಕೆ ಕಳುಹಿಸಿದ್ದ ಟೊಮೆಟೊ ಸಾಸ್‌ಗಳಲ್ಲಿ ಸೋಡಿಯಂ ಬೆಂಜೊಯೆಟ್ ಎನ್ನುವ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗಿತ್ತು. ಇದರಲ್ಲಿ ಉಪ್ಪಿನ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಟೊಮೆಟೊ ಸಾಸ್ ಬ್ರೈಟ್ ಮತ್ತು ರೆಡ್ ಆಗಿ ಕಾಣಿಸಲು ಕೃತಕ ಬಣ್ಣ ಬಳಸಲಾಗುತ್ತದೆ. ಈ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೊಮೆಟೊ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ. ಈ ಸಾಸ್ ತಿನ್ನುವುದರಿಂದ ರಕ್ತದೊತ್ತಡ ಅಧಿಕವಾಗುತ್ತದೆ, ನಿಶ್ಶಕ್ತಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ತಾಳ್ಮೆ ಮತ್ತು ಶಾಂತ ಮನಸ್ಥಿತಿ ಕಡಿಮೆಯಾಗುತ್ತದೆ. ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ಮೂಲಗಳಿಂದ ತಿಳಿದುಬAದಿದೆ. ಟೊಮೆಟೊ ಸಾಸ್ ಅಷ್ಟೇ ಅಲ್ಲ ಬೆಲ್ಲ, ಚಿಪ್ಸ್, ಫ್ರೈ ಬಟಾಣಿ ಪದಾರ್ಥಗಳಿಗೂ ಕೂಡಲ ಕಲಬೆರಕೆ ಮಾಡುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ಬಯಲಾಗಿದೆ. ಇಂತಹ ವಸ್ತುಗಳ ಖರೀದಿ ವಿಷಯದಲ್ಲಿ ಹೆಚ್ಚು ಗಮನ ನೀಡಬೇಕು ಎಂದು ಜನರಿಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ