ಬೆಂಗಳೂರು : ಭಾರತದ ಪ್ರಮುಖ ನಗರ ಮೂಲದ ಮೋಟಾಸ್ಪೋರ್ಟ್ಸ್ ಲೀಗ್ ಆಗಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (ಐಆರ್‌ಎಫ್)ಗೆ ಸ್ಯಾಂಡಲ್‌ವುಡ್ ತಾರೆ ಕಿಚ್ಚ ಸುದೀಪ್ ಎಂಟ್ರಿ ನೀಡಿದ್ದಾರೆ. ಆದರೆ, ಈ ಬಾರಿ ತಂಡದ ಮಾಲೀಕನಾಗಿ ಗುರುತಿಸಿಕೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಫ್ರಾಂಚೈಸಿಯನ್ನು ಘೋಷಿಸಿದ ಸುದೀಪ್, ತಂಡಕ್ಕೆ ಕಿಚ್ಚಸ್ ಕಿಂಗ್ಸ್ ಬೆಂಗಳೂರು (ಕೆಕೆಬಿ) ಎಂದು ಹೆಸರಿಡಲಾಗಿದೆ. ಬೆಳ್ಳಿತೆರೆಯಲ್ಲಿ ಯಶಸ್ವಿಯಾದಂತೆ ಈಗ ವೇಗದ ಟ್ರ‍್ಯಾಕ್ ಮೇಲೂ ಅಬ್ಬರಿಸಲು ಸುದೀಪ್ ನಿರ್ಧರಿಸಿದ್ದಾರೆ. ಈಗ ಒಬ್ಬ ಮಾಲೀಕ ಮತ್ತು ಕ್ರೀಡಾ ರಾಯಭಾರಿಯಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕರ್ನಾಟಕದಿಂದ ರಾಷ್ಟ್ರೀಯ ವೇದಿಕೆಗೆ ರೇಸಿಂಗ್‌ನ ಹೊಸ ಯುಗವನ್ನು ಮುನ್ನಡೆಸುತ್ತಿದ್ದಾರೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ಆಗಸ್ಟ್ನಲ್ಲಿ ಆರಂಭವಾಗಲಿದ್ದು, ಬೆAಗಳೂರು, ದೆಹಲಿ, ಹೈದರಾಬಾದ್,ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು
ಇತರ ಪ್ರದೇಶಗಳ ಫ್ರಾಂಚೈಸಿ ತಂಡಗಳು ರೋಮಾAಚಕ ಬೀದಿ ಸರ್ಕ್ಯೂಟ್‌ಗಳಲ್ಲಿ, ಈ ಲೀಗ್ ನಡೆಯಲಿವೆ. ಇದು ಭಾರತದ ಮೊದಲ ಕಾರ್ ರೇಸಿಂಗ್ ಲೀಗ್ ಆಗಿರಲಿದೆ.