Wednesday, November 5, 2025
Flats for sale
Homeಕ್ರೈಂಬೆಂಗಳೂರು : ಆಜಾನ್ ವೇಳೆ ಭಕ್ತಿಗೀತೆ ಹಾಕಿದ್ದಕ್ಕೆ ಮುಸ್ಲಿಂ ಯುವಕರಿಂದ ಮಾರಣಾಂತಿಕ ಹಲ್ಲೆ: ಮೂವರ ಬಂಧನ,ಸಂಸದ...

ಬೆಂಗಳೂರು : ಆಜಾನ್ ವೇಳೆ ಭಕ್ತಿಗೀತೆ ಹಾಕಿದ್ದಕ್ಕೆ ಮುಸ್ಲಿಂ ಯುವಕರಿಂದ ಮಾರಣಾಂತಿಕ ಹಲ್ಲೆ: ಮೂವರ ಬಂಧನ,ಸಂಸದ ತೇಜಸ್ವಿ ಸೂರ್ಯ ಆಕ್ರೋಶ.

ಬೆಂಗಳೂರು : ಆಜಾನ್ ವೇಳೆ ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ನಗರತ್​ಪೇಟೆಯಲ್ಲಿ ನಡೆದಿದೆ.ಈ ಪ್ರಕರಣ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಲೇಮಾನ್, ಶಹನವಾಜ್, ರೋಹಿತ್ ಎಂದು ತಿಳಿದುಬಂದಿದೆ.

ಬೆಂಗಳೂರಿನ ನಗರತ್​ಪೇಟೆಯ ಸಿದ್ದಣ್ಣ ಗಲ್ಲಿ ಏರಿಯಾದಲ್ಲಿ ಮಾಲೀಕ ಮೊಬೈಲ್‌ ಶಾಪ್‌ ನಡೆಸುತ್ತಿದ್ದ. ಮಸೀದಿ ಪಕ್ಕದಲ್ಲೇ ಮಾಲೀಕ ಮೊಬೈಲ್ ಶಾಪ್‌ ನಡೆಸುತ್ತಿದ್ದ.ಜೋರು ಸೌಂಡ್ ಇಟ್ಟ ಪರಿಣಾಮ ನಮಾಜ್ ವೇಳೆ ಭಕ್ತಿಗೀತೆ ಆಫ್‌ ಮಾಡುವಂತೆ ಯುವಕರು ಧಮ್ಕಿ ಹಾಕಿದ್ದು, ಬಳಿಕ ಏಕಾಏಕಿ ಹಲ್ಲೆ ನಡೆಸಿದ್ದಾರೆ.ಅದಲ್ಲದೆ ಇರಿದು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಸಂಜೆ ವೇಳೆ ಪೂಜೆ ಮಾಡುವ ಸಮಯದಲ್ಲಿ ಭಜನೆ ಹಾಡು ಹಾಕ್ತಾ ಇದ್ದೆ. ಈ ವೇಳೆ ಅಂಗಡಿಗೆ ಬಂದು, ‘ನಮ್ಮ ಆಜಾನ್ ಟೈಂನಲ್ಲಿ ಯಾಕೆ ಹಾಡು ಹಾಕ್ತಾ ಇದ್ದೀಯಾ’ ಎಂದು ಪ್ರಶ್ನೆ ಮಾಡಿದ್ರು. ನಂತರ ಹಲ್ಲೆಗೆ ಮುಂದಾದ್ರು, ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಮೊದಲು ಸ್ಪೀಕರ್ ತೆಗೆದುಕೊಂಡು ನನ್ನ ತಲೆಗೆ ಹೊಡೆದ್ರು. ಕೈಯಲ್ಲಿ ವೆಪನ್ ಕೂಡ ಇದ್ದ ಹಾಗೆ ಇತ್ತು. ಹಾಗಾಗಿ ಇಷ್ಟು ಗಾಯ ಆಗಿದೆ ಎಂದಿದ್ದಾರೆ. ಸಿ ಹಲಸೂರು ಗೇಟ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಶಹನವಾಜ್, ಸುಲೇಮಾನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ. ಬಾಕಿ ಆರೋಪಿಗಳಾದ ಡ್ಯಾನಿಶ್ ಮತ್ತು ತರಣ ಪರಾರಿಯಲ್ಲಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular