ಬೆಂಗಳೂರು : ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ರೀತಿಯಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಸ್ವಪಕ್ಷೀಯ ಶಾಸಕರಿಗೆ ಕೊನೆಗೂ ತಲಾ 5೦ ಕೋಟಿ ರೂ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರುನಿಶಾನೆ ತೋರಿದ್ದಾರೆ.
ರಾಜ್ಯ ಉಸ್ತು ವಾರಿ ಸುರ್ಜೇವಾಲಾಗೆ ಕಾಂಗ್ರೆಸ್ ಶಾಸಕರು ಅಭಿವೃದ್ಧಿ ವಿಷಯದ ಬಗ್ಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದ ಬೆನ್ನಲ್ಲೇ ಇಂಥದೊAದು ಬೆಳವಣಿಗೆಗೆ ನಡೆದಿರುವುದು ಗಮನಾರ್ಹ. 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 5೦ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಹಂಚಿಕೆ ಮಾಡಲಾಗುವುದು. ಇದರಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಮತ್ತು ಸೇತುವೆ ಕಾಮಗಾರಿಗಳು, ಗ್ರಾಮೀಣ ರಸ್ತೆ ಹಾಗೂ ಸೇತುವೆ ಮತ್ತು ನಗರ ಪ್ರದೇಶದ ಕಾಮಗಾರಿಗಳಿಗೆ 37.5೦ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಮುಖ್ಯಮಂತ್ರಿಗಳು ಕಾಂಗ್ರೆಸ್ನ ವಿಧಾನಸಭಾ ಸದಸ್ಯರಿಗೆ ತಲಾ 5೦ ಕೋಟಿ ರೂ. ಅನುದಾನ ಮಂಜೂರು ಮಾಡುವ ಸಂಬAಧ ಪ್ರತಿ ಶಾಸಕರಿಗೂ ಪತ್ರ ಬರೆಯಲಾಗಿದೆ. ಈ ಪತ್ರವನ್ನು ಶಾಸಕರ ಆಪ್ತ ಸಹಾಯಕರು ಕೂಡಲೇ ವಿಧಾನಸೌಧದಲ್ಲಿರುವ ಸಿಎಂ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿ ಶಶಿಕುಮಾರ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ಶಾಸಕಾಂಗಪಕ್ಷದ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ತಿಳಿಸಿದ್ದಾರೆ.
ಅಭಿವೃದ್ಧಿಗೂ ಅನುದಾನಕ್ಕೂ ಇರುವ ನಂಟಿನAತೆಯೇ ಅಸಮಾಧಾನಕ್ಕೂ ಆಪರೇಷನ್ಗೂ ಗಾಢವಾದ ನಂಟಿರುತ್ತದೆ ಎನ್ನುವುದು ಪ್ರಸಕ್ತ ರಾಜಕೀಯ ವಿದ್ಯಮಾನದಲ್ಲಿ ಸೂರ್ಯಚಂದ್ರರಷ್ಟೆ ಸತ್ಯ.ಈ ವಾಸ್ತವ ಸನ್ನಿವೇಶವನ್ನು ಸುರ್ಜೇವಾಲಾ ವರದಿ ಮುಖೇನ ಕೈ ಹೈಕಮಾಂಡ್ ತ್ವರಿತವಾಗಿ ಅರಿತ ಪರಿಣಾಮವೇ ಸ್ವಪಕ್ಷೀಯ ಶಾಸಕರಿಗೆ ತಲಾ 5೦ ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಸಿಗುವಂತಾಗಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ವರಿಷ್ಠರು ರಾಜಕೀಯವಾಗಿ ಮುಂಜಾಗ್ರತೆ ವಹಿಸಿರುವುದು ಸ್ಪಷ್ಟವಾಗಿದೆ.
ಸುನಾಮಿ ಮುನ್ಸೂಚನೆಯ ಅರಿವು: ಸರ್ಕಾರಕ್ಕೆ 2 ವರ್ಷ ಭರ್ತಿ ಯಾಗುವ ಮುನ್ನವೇ ಕೈ ಶಾಸಕರಲ್ಲಿ ಮಡುಗಟ್ಟಿದ್ದ ಅತೃಪ್ತಿ ಜೂನ್ತಿಂಗಳಲ್ಲಿ ಸ್ಫೋಟವಾಯಿತು. ಹಿರಿಯ ಶಾಸಕರಾದ ಬಿ.ಆರ್.ಪಾಟೀಲ್ ಮನೆಹಂಚಿಕೆ ವಿಷಯದಲ್ಲಿ ಭ್ರಷ್ಟಾಚಾರದ ಆಪಾದನೆ ಮಾಡಿದ್ದರೆ, ಇತ್ತ ರಾಜು ಕಾಗೆ ಸರ್ಕಾರದಿಂದ ಅನುದಾನ ಸಿಗದೆ ಸಮುದಾಯ ಭವನಗಳನ್ನು ಕಟ್ಟಲಾಗುತ್ತಿಲ್ಲ.ಹೀಗೆ ಆದರೆ ಬೆಂಗಳೂರಿಗೆ ಹೋಗಿ ಸಿಎಂಗೇ ರಾಜೀನಾಮೆ
ಕೊಡಬೇಕಾಗುತ್ತದೆ ಎಂದಿದ್ದರು. ಮತ್ತೊಂದೆಡೆ ಮೊಳಕಾಲ್ಮೂರು ಶಾಸಕ ಗೋಪಾಲಕೃಷ್ಣ ಶಾಲಾ ಕೊಠಡಿ, ಹಳ್ಳಿಗಳಲ್ಲಿ ಚರಂಡಿ ನಿರ್ಮಿಸುವುದಕ್ಕೂ ಆಗದ ಸ್ಥಿತಿ ಶಾಸಕರದ್ದಾಗಿದೆ. ಗ್ಯಾರಂಟಿ ಗಳಿAದ ಅಭಿವೃದ್ಧಿ ಮೇಲೆ ಪರಿಣಾಮ ಆಗುತ್ತಿದೆ ಎನ್ನುವ ಬಸವರಾಜು ಶಿವಗಂಗಾ ಮಾತು ಚರ್ಚೆಗೆ ಕಾರಣವಾಗಿತ್ತು.
ಶಾಸಕರ ಅಸಮಾಧಾನದ ಲಾಭ ಪಡೆಯಲು ವಿಪಕ್ಷಗಳು ಟೀಕಾಸ್ತç ಪ್ರಯೋಗಕ್ಕೆ ಮುಂದಾಗಿದ್ದನ್ನು ಹೈಕಮಾಂಡ್ ಗ್ರಹಿಸಿತು. ಹಾಗಾಗಿ ಈ ಅತೃಪ್ತ ಮನಸ್ಸುಗಳೇ ಸುರ್ಜೇವಾಲಾ ಅವರನ್ನು ದೆಹಲಿಯಿಂದ ಕೆಪಿಸಿಸಿ ಕಚೇರಿಗೆ ಎಳೆದುತಂದಿದ್ದವು. 2 ವಾರದ ಅಂತರದಲ್ಲಿ ಶಾಸಕರ ಮನಸ್ಥಿತಿ ಅಳೆದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವರಿಷ್ಠರಿಗೆ ಗಂಭೀರತೆ ಮನವರಿಕೆ ಮಾಡಿಕೊಟ್ಟಿದ್ದರು.


