Wednesday, October 22, 2025
Flats for sale
Homeರಾಜ್ಯಬೆಂಗಳೂರು : ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೊರಟ ವಿದ್ಯಾರ್ಥಿ ನಾಪತ್ತೆ..!

ಬೆಂಗಳೂರು : ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೊರಟ ವಿದ್ಯಾರ್ಥಿ ನಾಪತ್ತೆ..!

ಬೆಂಗಳೂರು : ಈ ಕಲಿಯುಗದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ವಿದ್ಯಾರಣ್ಯಪುರದ ಪದವಿ ವಿದ್ಯಾರ್ಥಿಯೊಬ್ಬ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದಾನೆ.

ಬಿಇಎಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರಣ್ಯಪುರದ ಮೋಹಿತ್ ಋಷಿ (೧೭) ನಾಪತ್ತೆಯಾಗಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಜ.16 ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋಗುವ ಮುನ್ನ “ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ ನನ್ನ ಹುಡುಕಲು ಪ್ರಯತ್ನ ಪಡಬೇಡಿ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನು ಆರಿಸಿಕೊಂಡಿದ್ದಾನೆ. ಈ ರಾಜ ಜೀವನವನ್ನು ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದಾನೆ’’ ಎಂದು ಪತ್ರ ಬರೆದಿಟ್ಟು ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.

ಪುತ್ರ ನಾಪತ್ತೆಯಾಗಿರುವ ಬಗ್ಗೆ ಮೋಹಿತ್ ಋಷಿಯ ತಂದೆ ಅರ್ಜುನ್ ಕುಮಾರ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮೋಹಿತ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋಹಿತ್? ಭಾವಚಿತ್ರವನ್ನು ಪೋಷಕರು ಹಂಚಿಕೊAಡಿದ್ದು, ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular