Friday, February 21, 2025
Flats for sale
Homeರಾಜ್ಯಬೆಂಗಳೂರು : ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ,ದೂರು ದಾಖಲು ..!

ಬೆಂಗಳೂರು : ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ,ದೂರು ದಾಖಲು ..!

ಬೆಂಗಳೂರು : ನಗರದಲ್ಲಿ ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ನಡೆದಿದೆ. ಡಾಕ್ಟರ್ ಒಬ್ಬರಿಗೆ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದು, ಡಾಕ್ಟರ್ ಒಂದು ಕ್ಷಣ ಶಾಕ್ ಆಗಿದ್ದಾರೆ.

ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆಯೊಬ್ಬರು, ಅವರನ್ನು ಕೊಲ್ಲುವ ಸಂಚು ಮಾಡಿದ್ದಾರೆ. ಬಳಿಕ ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದಾರೆ. ಇದನ್ನು ಕೇಳಿ ಶಾಕ್ ಆದ ಡಾಕ್ಟರ್ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದಾರೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್ ಶಾರ್ಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರುಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕಅಸಲಿ ಸತ್ಯ ಬಯಲಾಗಲಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular