Thursday, March 12, 2026
Flats for sale
Homeರಾಜ್ಯಬೆಂಗಳೂರು : ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ ಪತ್ತೆ .

ಬೆಂಗಳೂರು : ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ ಪತ್ತೆ .

ಬೆಂಗಳೂರು : ಇಂದಿನ ಮಕ್ಕಳಿಗೆ ಮೊಬೈಲ್ ಇಲ್ಲದೆ ಊಟನೇ ಸೇರೋದಿಲ್ಲ ಯಾಕೆಂದರೆ ಮೊಬೈಲ್ ಅನ್ನು ಅಷ್ಟು ನೆಚ್ಚಿಕೊಂಡಿದ್ದಾರೆ .ನಮ್ಮ ಕಾಲದಲ್ಲಿ ನಾವು ಮಣ್ಣು ಕೆಸರು ಎಲ್ಲ ಕಡೆ ಓಡೋಡಿ ಎಣಿಸಲು ಆಗದಂತಹ ಆಟಗಳನ್ನು ಆಡುತ್ತಿದ್ದೆವು ಆದರೆ ಈಗಿನ ಮಕ್ಕಳಿಗಂತೂ ಕಣ್ಣ ಮುಂದೆ ಮೊಬೈಲ್ ಇದ್ರೆ ಆಕಾಶ ತಲೆಮೇಲೆ ಬಿದ್ದರೂ ಗೊತ್ತಾಗಲ್ಲ ಅಂತಹ ಸ್ಥಿತಿ ಉಂಟಾಗಿದೆ .

ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಿಂದ ಮಾನಸಿಕ ನೆಮ್ಮದಿಗೆ ಬಂಗ ಅದಾದಂತೂ ನಿಜವಾದ ವಿಚಾರ. ಹೊರಗಡೆ ಹೋಗಿ ಕ್ರಿಕೆಟ್, ಪುಟ್‌ಬಾಲ್ ಇನ್ನಿತರ ಆಟವಾಡಿ ದೈಹಿಕವಾಗಿ ಸದೃಢವಾಗುವ ವಯಸ್ಸು, ಅದರೆ ಇಂತಹ ದೈಹಿಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಮಕ್ಕಳು ಆಟ ಆಡುತ್ತಿದ್ದಾರೆ. ಊಟಾ ಬಿಟ್ಟರು ಮೊಬೈಲ್ ಬಿಡಲ್ಲ ಅಂತಿದ್ದಾರೆ. ಮಕ್ಕಳ ಮೊಬೈಲ ಸ್ಕೀನಿಂಗ್ ಟೈಮ್ ಏರಿಕೆಯಿಂದ ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ ಶುರುವಾಗಿದ್ದು ಎಂದು ವೈದ್ಯರು ಅಚ್ಚರಿಯ ಅಂಶ ಹೊರ ಹಾಕಿದ್ದಾರೆ.

ಮಯೋಪಿಯಾ ಡಿಸೀಸ್​ ಅಂದರೆ ಏನು ?

ಮಯೋಪಿಯಾ ಡಿಸೀಸ್​ ಅಂದರೆ ಕಣ್ಣಿನ ಸಮಸ್ಯೆ ,ಶಾಶ್ವಾತ ದೃಷ್ಠಿದೋಷದಂತ ಸಮಸ್ಯೆ .ಇದು ಸಾಮಾನ್ಯವಾಗಿ ಅತಿ ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳಲ್ಲಿ ಬರುತ್ತದೆ.ಮಯೋಪಿಯಾ ಡಿಸೀಜ್​ನಿಂದ ಮುಂದಿನ ದಿನಗಳಲ್ಲಿ ಶೇ 50% ರಿಂದ 60 ರಷ್ಟು ಮಕ್ಕಳಿಗೆ ದೃಷ್ಟಿ ದೋಷ ಸಮಸ್ಯೆ ಕಾಡಲಿದೆ ಖ್ಯಾತ ನೇತ್ರ ತಜ್ಞರ ಸಂಶೋಧನೆಯಲ್ಲಿ ಆತಂಕಕಾರಿ ವಿಚಾರ ತಿಳಿಸಿದ್ದಾರೆ.ಇದರಿಂದ ಮೊಬೈಲ್ ಸ್ಕ್ರೀನಿಂಗ್ ಕಡಿಮೆ ಮಾಡುವಂತೆ ವೈದ್ಯರಿಂದ ಟೈಂ ಟೇಬಲ್ ನೀಡುವಂತೆ ಯಾವ ಯಾವ ಟೈಂನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಕು ಎಂದು ರಿಸರ್ಚ್ ಮಾಡಿದ್ದು, ದಿನೇ ದಿನೇ ಹೆಚ್ಚುತ್ತಿರು ಮೊಬೈಲ್ ಸ್ಕ್ರೀನಿಂಗ್ ಸಮಸ್ಯೆಗೆ ಸೂಕ್ತ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

ಇನ್ನೂ ಮೊಬೈಲ್ ಅತಿಯಾದ ಬಳಕೆಯಿಂದ ಮಾನಸಿಕ ನೆಮ್ಮದಿ ಹದಗೆಡುತ್ತಿರುವುದು ಕಂಡುಬಂದಿದೆ. ಈ ರೀತಿ ಮುಂದುವರಿದರೆ ಮುಂದೆ ಇರುವ ಯುವಪೀಳಿಗೆಗಳಿಗೆ ದೃಷ್ಠಿ ಸಮಸ್ಯೆ ಅತಿಹೆಚ್ಚು ಕಾಡುತ್ತದೆ ಮೀತಿ ಮಿರಿದ ಮೊಬೈಲ್ ಬಳಕೆ ಮಕ್ಕಳ ಕಣ್ಣಿನ ಸಮಸ್ಯೆ ದೃಷ್ಠಿ ದೋಷಕ್ಕೆ ಕಾಣವಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಮೈಯೋಪಿಯ ಎಂಬ ಮಾರಕ ಕಾಯಿಲೆಗೆ ವಿದ್ಯಾರ್ಥಿಗಳನ್ನ ಕಾಡುತ್ತಿದೆ. ಇನ್ನಾದ್ರೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಗಮನಹರಿಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular