ಬೆಂಗಳೂರು : ಅಪರ್ಣ ಅಂದರೆ ಸ್ಪಷ್ಟತೆ,ಕಂಠಸಿರಿ ಅಂತಾನೆ ಹೇಳಬಹುದು ಮನುಷ್ಯರು ಬದುಕಿರುವಾಗ ಬೆಲೆ ಗೊತ್ತಾಗಲ್ಲ ಅವರನ್ನು ಕಳೆದುಕೊಂಡ ಮೇಲೆ ಅವರ ಅತ್ಯಮೂಲ್ಯ ಬೆಲೆ ಗೊತ್ತಾಗೋದಂತೂ ನಿಜ.ಕಳೆದ ಹದಿಮೂರು ವರ್ಷಗಳಿಂದ ಮೆಟ್ರೋದ ಹಸಿರು ಮತ್ತು ನೇರಳೆ ಮಾರ್ಗದ ಮೆಟ್ರೋ ಸ್ಟೇಷನ್, ರೈಲಿನಲ್ಲಿ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಾಯ್ಸ್ ಬರುತ್ತಿತ್ತು. ಆದರೆ ಕಳೆದ ಶುಕ್ರವಾರ ಕ್ಯಾನ್ಸರ್ ನಿಂದ ಅಪರ್ಣಾ ಅವರು ನಮ್ಮನ್ನು ಅಗಲಿದ್ದಾರೆ. ಆದರೆ ಇದೀಗ ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್ ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್ಗಳ ಹುಡುಕಾಟ ನಡೆಸುತ್ತಿದ್ದಾರೆ. ಕನ್ನಡ ರೇಡಿಯೋ ಜಾಕಿಗಳು, ಆ್ಯಂಕರ್ ಗಳು ಹಾಗೂ ಸಿಂಗರ್ ಗಳ ವಾಯ್ಸ್ ಗಳ ಸ್ಯಾಂಪಲ್ ಅನ್ನು ಮೆಟ್ರೋ ಅಧಿಕಾರಿಗಳು ಕೇಳಿದ್ದಾರೆ.ಒಟ್ಟಿನಲ್ಲಿ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಮನದಲ್ಲೂ ಅಪರ್ಣ ಅಜರಾಮರ ಎಂದು ತಿಳಿಯುತ್ತಾಯಿದೆ.
ಅಪರ್ಣಾ ಮೃತಪಟ್ಟ ಹಿನ್ನೆಲೆ ಹೊಸ ವಾಯ್ಸ್ ಗಾಗಿ ಹುಡುಕಾಟ ನಡೆದಿದೆ. ಸಾಕಷ್ಟು ಜನರು ನಾವು ವಾಯ್ಸ್ ಕೊಡ್ತಿವಿ ಎಂದು ಮನವಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.ಸದ್ಯ ಹಳದಿ ಮಾರ್ಗದ ಆರ್ವಿ ರೋಡ್ ಟೂ ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಸಿದ್ದವಾಗಿದೆ. ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್ ಹಾಕುವ ಬಗ್ಗೆ ಬಿಎಂಆರ್ಸಿಎಲ್ ಸಿದ್ದತೆ ನಡೆಸಿತ್ತು.ಆದರೆ ಅವರು ಈಗ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ಉದ್ಘಾಟನೆ ಆಗಿರೋ ಎಲ್ಲಾ ಮಾರ್ಗದಲ್ಲಿ ಅಪರ್ಣಾ ಧ್ವನಿ ಬದಲಾಗೋದಿಲ್ಲ. ಚಲ್ಲಘಟ್ಟ-ವೈಟ್ ಫೀಲ್ಡ್, ಸಿಲ್ಕ್ ಇನ್ಸ್ಟಿಟ್ಯೂಟ್ – ನಾಗಸಂದ್ರ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಯಲಿದೆ.ಇನ್ನು ಮೆಟ್ರೋ ಹೊಸ ಮಾರ್ಗಗಳಿಗೆ ಯಾರ ವಾಯ್ಸ್ ಹಾಕಿದ್ರೆ ಸೂಕ್ತ ಎಂದು ಎಲ್ಲಾ ರೇಡಿಯೋ ಜಾಕಿ ಮತ್ತು ಕನ್ನಡ ಆ್ಯಂಕರ್ ಹಾಗೂ ಸಿಂಗರ್ ವಾಯ್ಸ್ ಗಳನ್ನು ಹುಡುಕುತ್ತ ಇದ್ದಾರೆ.ಒಟ್ಟಿನಲ್ಲಿ ಪ್ರತಿದಿನ ಮೆಟ್ರೋ ರೈಲಿನಲ್ಲಿ ಅಪರ್ಣಾ ಅವರ ಧ್ವನಿಯನ್ನು ಕೇಳಿ ಸಂತೋಷ ಪಡುತ್ತಿದ್ದ ಕನ್ನಡಿಗರು ಹೊಸ ಮೆಟ್ರೋ ಮಾರ್ಗದಲ್ಲಿ ಅಪರ್ಣ ರವರ ಸುಮದುರ ಕಂಠವನ್ನು ಮಿಸ್ ಮಾಡುವುದಂತೂ ನಿಜ.


