Thursday, March 12, 2026
Flats for sale
Homeರಾಜ್ಯಬೆಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಸಿಎಂ ಇದ್ದ ವೇದಿಕೆಗೆ ಏಕಾಏಕಿ ನುಗ್ಗಿದ ಯುವಕ,ದಂಗಾದ...

ಬೆಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಸಿಎಂ ಇದ್ದ ವೇದಿಕೆಗೆ ಏಕಾಏಕಿ ನುಗ್ಗಿದ ಯುವಕ,ದಂಗಾದ ವೇದಿಕೆಯಲ್ಲಿದ್ದ ಗಣ್ಯರು, ಯುವಕನ ಬಂಧನ.

ಬೆಂಗಳೂರು : ವಿಧಾನಸೌಧದ ಮುಂದೆ ನಡೆಯುತ್ತಿರುವ ಕಾರ್ಯಕ್ರಮದ ವೇದಿಕೆ ಮೇಲೆ ಶಾಲು ಹಿಡಿದು ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯುವಕ ಯತ್ನಿಸಿದ್ದು ವೇದಿಕೆ ಮೇಲ್ಭಾಗಕ್ಕೆ ಜಂಪ್ ಮಾಡಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಹಲವು ಗಣ್ಯರು ತಬ್ಬಿಬ್ಬಾಗಿದ್ದಾರೆ. ಸಿಎಂ ಅಂಗರಕ್ಷಕರು ಕೂಡಲೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದರೂ ಯುವಕ ಸಿಎಂ ಕಡೆ ಶಾಲು ಎಸೆದಿದ್ದಾನೆ. ಯುವಕ ನುಗ್ಗಿದ ವೇಗಕ್ಕೆ ಗಣ್ಯರು ಗಲಿಬಿಲಿಗೊಂಡಿದ್ದು ವೇದಿಕೆಯಲ್ಲಿರುವವರಿಗೆ ಆ ಕ್ಷಣ ದಂಗುಬಡಿದಂತಾಗಿದೆ.

ಸಿಎಂ ಸಿದ್ದರಾಮಯ್ಯಗೆ ಭದ್ರತಾಲೋಪ ಎದುರಾಗಿದೆ. ವಿಧಾನಸೌಧದ ಮುಂಭಾಗ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಯುವಕನೋರ್ವ ವೇದಿಕೆ ಏರಿದ ಘಟನೆ ನಡೆದಿದೆ. ಇಂದು ಪ್ರಜಾಪ್ರಭುತ್ವದ ದಿನಾಚರಣೆಯ ಕಾರ್ಯಕ್ರಮವನ್ನು ವಿಧಾನಸೌಧದ ಮುಂದೆ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ವೇಳೆ ಸಿಎಂ ಇದ್ದ ವೇದಿಕೆಗೆ ಯುವಕನೋರ್ವ ಕೈಯಲ್ಲಿ ಶಾಲು ಹಿಡಿದು ಏಕಾಏಕಿ ನುಗ್ಗಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದು ಸದ್ಯ ಯುವಕನ ವಿಚಾರಣೆ ನಡೆಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular