ಬೀದರ್ : ಶಾಲಾ ವಾಹನ ಹರಿದು 8 ವರ್ಷದ ಬಾಲಕಿ ಸಾವನಪ್ಪಿದ ಘಟನೆ ಬೀದರ್ ನ ಜನವಾಡಾ ಗ್ರಾಮದ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ.
ಬೀದರ್ ತಾಲೂಕಿನ ಜನವಾಡ ಗ್ರಾಮದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಮೃತ ದುರ್ದೈವಿ.
ಗುರುನಾನಕ್ ಶಾಲೆಯ ಬಸ್ ನಿಂದ ಬಸ್ ಚಾಲಕ ಮೃತ ಬಾಲಕಿ ಸೇರಿ ಮೂವರನ್ನು ಬಸ್ ಚಾಲಕ ಕೆಳಗಿಳಿಸಿದ್ದನು ಬಾಲಕಿ ಸ್ಕೂಲ್ ಬಸ್ ಇಳಿದು ಬಸ್ ಪಕ್ಕವೇ ನಿಂತಿದ್ದು ಬಾಲಕಿ ಬಸ್ ಬಳಿಯಿರುವುದನ್ನು ಗಮನಿಸದೆ ಚಾಲಕ ಬಸ್ ಓಡಿಸಿದ್ದಾನೆ.ಈ ವೇಳೆ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ಇನ್ನೂ ಬಾಳಿ ಬದುಕಬೇಕಾಗಿದ್ದ ಬಾಲಕಿ ಗಡಿಕುಶನೂರು ಗ್ರಾಮದ ರುತ್ವಿ ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಸಾವನಪ್ಪಿದ್ದಾಳೆ.


