ಬೀದರ್ : ಲೋಕಸಭೆ ಚುನಾವಣೆಯಲ್ಲಿ ಮರಾಠಾ ಸಮಾಜದ ಮುಖಂಡನಿಗೆ ಟಿಕೆಟ್ ನೀಡುವಂತೆ ಹೇಳುವ ಮೂಲಕ ಕೇಂದ್ರ ಸಚಿವರು ಆಗಿರುವ ಹಾಲಿ ಸಂಸದ ಭಗವಂತ ಖೂಬಾಗೆ ಪರೋಕ್ಷವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ಸಂದೇಶ ರವಾನಿಸಿದ್ದಾರೆ.
ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ನಂತರ ಕೇಂದ್ರ ಸಚಿವ ಭಗವಂತ ಖೂಬಾಗೆ ತಿರುಗಿ ಬಿದ್ದ ಮತ್ತೋರ್ವ ಬಸವಕಲ್ಯಾಣ ಶಾಸಕ ಶರಣು ಸಲಗರ್. ವಿಧಾನಸಭೆ ಚುನಾವಣೆಗೂ ಮುನ್ನ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ್ ಮಧ್ಯೆ ಬಿದಿರಂಪಾಟ ಜರುಗಿತ್ತು.
ಆದರೆ ವಿಧಾನಸಭೆ ಚುನಾವಣೆ ವೇಳೆ ಸಂಸದ ಭಗವಂತ ಖೂಬಾ ಅವರೊಂದಿಗೆ ಏನು ನಡೆದಿಲ್ಲ ಎನ್ನುವಂತೆ ವರ್ತಿಸಿದ ಶಾಸಕ ಶರಣು ಸಲಗರ್ ಈ ಮತ್ತೊಮ್ಮೆ ತಿರುಗಿ ಬಿದ್ದಂತೆ ಕಾಣಿಸುತ್ತಿದೆ.
ಬಸವಕಲ್ಯಾಣ ನಗರದ ಶಾಸಕರ ಕಚೇರಿಯಲ್ಲಿ ನಡೆದ ಸಭೆ ನಂತರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಿಂದ ಮರಾಠ ಸಮಾಜಕ್ಕೆ ಟಿಕೆಟ್ ನೀಡುವಂತೆ ಹೇಳಿಕೆ ನೀಡುವ ಮೂಲಕ ಹಾಲಿ ಸಂಸದರಿಗೆ ಟಿಕೆಟ್ ನೀಡದಂತೆ ಪರೋಕ್ಷವಾಗಿ ಹೈಕಮಾಂಡ್’ಗೆ ಸಂದೇಶ ರವಾನಿಸಿದ್ದಾರೆ .


