ಬೀದರ್ : ಶಾಸಕ ಪ್ರಭು ಚೌಹಾಣ್ – ಬಾವಿ ಭೀಗರ ನಡುವೆ ಮಾರಾಮಾರಿಯಾದ ವಿಡಿಯೋ ವೈರಲ್ ಆಗಿದೆ ಮ ಗನ ನಿಶ್ಚಿತಾರ್ಥವಾಗಿದ್ದು ಮದುವೆ ವಿಚಾರಕ್ಕೆ ಗಲಾಟೆ ಎನ್ನಲಾಗಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಉದ್ದಗೀರ್ ನ ಯುವತಿಯೊಂದಿಗೆ ಪ್ರಭು ಚೌಹಾಣ್ ಮಗ ಪ್ರತೀಕ್ ಚೌಹಾಣ್ ನೊಂದಿಗೆ ನಿಶ್ಚಿತಾರ್ಥವಾಗಿತ್ತು.
ಮದುವೆ ಲೇಟಾದ ವಿಚಾರಕ್ಕೆ ಎರಡು ಕಡಗಳಿಂದ ಮಾತಿಗೆ ಮಾತು ಬೆಳೆದು ಗಲಾಟೆ. ನಡೆದಿದ್ದು ಘಟನೆ ವಿಕೋಪಕ್ಕೆ ಹೋಗಿ ಪರಸ್ಪರ ಕೈ ಕೈ ಮಿಲಾಸಿಕೊಂಡು ಮಾರಾಮಾರಿಯಾಗಿದೆ. ಮಾರಾಮಾರಿಯಿಂದ ಎರಡು ಕಡೆವರಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಂದ ಪರಿಸ್ಥಿತಿ ನಿಯಂತ್ರಣವಾಗಿದೆ.
ಹೊಕ್ರಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಚೌಹಾಣ್ ಮತ್ತು ಭಾವಿ ಭೀಗರ ನಡುವೆ ಮಾರಾಮಾರಿಯ ವಿಡಿಯೋ ವೈರಲ್ ಆಗಿದೆ. ರಾಜಕಾರಣಿಗಳೇ ಈ ರೀತಿ ಗಲಾಟೆ ಮಾಡಿದರೆ ಹೇಗೆಂದು ಸಾಮಾಜಿಕಜಾಲತಾಣದಲ್ಲಿ ಕೆಲವರು ಆಕ್ರೋಶ ಹೊರಹಾಕಿದ್ದಾರೆ.