Wednesday, November 5, 2025
Flats for sale
Homeರಾಜ್ಯಬೀದರ್ : ಮೂರನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ,ಕೊಂದು,ರೂಂ ಬಾಗಿಲು ಮುಚ್ಚಿ ಮಲಗಿದ ಕತರ್ನಕ್ ಮಲತಾಯಿ,ಸಿ.ಸಿ ಟಿವಿಯಲ್ಲಿ...

ಬೀದರ್ : ಮೂರನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ,ಕೊಂದು,ರೂಂ ಬಾಗಿಲು ಮುಚ್ಚಿ ಮಲಗಿದ ಕತರ್ನಕ್ ಮಲತಾಯಿ,ಸಿ.ಸಿ ಟಿವಿಯಲ್ಲಿ ಸೆರೆ…!

ಬೀದರ್ : ಮಗುವಿಗೆ ಆಟ ಆಡಿಸುವ ನೆಪದಲ್ಲಿ ಟೆರಸ್ ಮೇಲೆ ಕರೆದೊಯ್ದು ಕ್ರೂರಿ ತಾಯಿ ತಳ್ಳಿದ್ದ ಘಟನೆ ಬೀದರ್ ಜಿಲ್ಲೆಇ ನಡೆದಿದೆ.

ಮಲತಾಯಿಯಿಂದಲೇ ದಾರುಣ ಅಂತ್ಯ ಕಂಡ ಬಾಲಕಿಯನ್ನು ಶಾನವಿ ಎಂದು ತಿಳಿದು ಬಂದಿದೆ.

ಮೂರನೇ ಮಹಡಿಯಿಂದ ಬಾಲಕಿಗೆ ತಳ್ಳುವ ವಿಡಿಯೋ ಲಭ್ಯ ವಾಗಿದ್ದು ಮಗುವಿಗೆ ಆಟ ಆಡಿಸುವ ನೆಪದಲ್ಲಿ ಖುರ್ಚಿ ಮೇಲೆ ಹತ್ತಿಸಿ, ಬಳಿಕ ಮಹಡಿಯಿಂದ ಕೆಳಕ್ಕೆ ಕಿಲ್ಲರ್ ತಾಯಿ ತಳ್ಳಿದ್ದಾಳೆ.

ಮಗುವನ್ನ ಖುರ್ಚಿ ಮೇಲೆ ಹತ್ತಿಸಿ, ಯಾರಿಗೂ ಕಾಣದಂತೆ ಮಲತಾಯಿ ರಾಧಾ ಟೆರಸ್ ಮೇಲೆ ಓಡಾಡಿದ್ದು ಬಳಿಕ ಮಗುವನ್ನು ತಳ್ಳಿ ಅವಸರದಲ್ಲೇ ಮನೆ ಒಳಗೆ ಹೋಗಿದ್ದ ವಿಡಿಯೋ ಪೋಲಿಸರಿಗೆ ದೊರೆತಿದೆ. ಮಲತಾಯಿ ರಾಧಾ ಓಡಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕ್ರೂರಿ ತಾಯಿಯ ಕೃತ್ಯ ಬಯಲಾಗಿದೆ.

ಆ.27ರಂದು ಈ ಘಟನೆ ನಡೆದಿದ್ದು ಘಟನೆ, ಕೃತ್ಯ ಎಸಗಿ ರೂಮ್ ಒಳಗೆ ಹೋಗಿ ಕಿಲ್ಲರ್ ರಾಧಾ ಮಲಗಿದ್ದಾಳೆ.

ಸೆ.12ರಂದು ನೆರೆಮನೆಯವರು ಸಿಸಿಟಿವಿ ವಿಡಿಯೋ ಕಳುಹಿಸಿದಾಗ ಮಲತಾಯಿಯ ಕೃತ್ಯ ಬಯಲಾಗಿದ್ದು ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸದ್ಯ. ಆರೋಪಿ ರಾಧಾ ನ್ಯಾಯಾಂಗ ಬಂಧನದಲ್ಲಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

Most Popular