ಬೀದರ್ : ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಪೊಲೀಸರಿಂದ ತನಿಖೆ… ಮತ್ತಷ್ಟು ಚುರುಕುಗೊಂಡಿದೆ.
ಇಂದು ಸಂತ್ರಸ್ಥೆಯೊಂದಿಗೆ ಬೆಂಗಳೂರಿನಲ್ಲಿ ಬೆಂಗಳೂರಿನ ಹಾಲಿ ಡೇ ಖಾಸಗಿ ಹೋಟೆಲ್ ನಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ನಿಶ್ಚಿತಾರ್ಥಕ್ಕೂ ಮೊದಲೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯ ಮಾಡಿದ್ದಾರೆ ಎಂದು ಸಂತ್ರಸ್ಥೆ ಎಫ್‌ಐಯನಲ್ಲಿಉಲ್ಲೇಖಿಸಿದ್ದು
ಹೀಗಾಗಿ ಒಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ತನಿಖೆ ನಡೆಯುತ್ತಿದೆ.
ಈ ಹಿಂದೇ ಪೊಲೀಸರು ಮಹಾರಾಷ್ಟ್ರದ ಲಾತೂರು ಮತ್ತು ಶಿರಸಿಯಲ್ಲಿ ತಂಗಿದ್ದ ಲಾಡ್ಜ್ ಗಳಲ್ಲಿ ಸ್ಥಳ ಮಹಜರು ಮಾಡಿದ್ದು ಈ ಮದ್ಯ ಶಿರಡಿಯಲ್ಲಿ ಸಂತ್ರಸ್ಥೆ ಮತ್ತು ಪ್ರತೀಕ್ ಚೌಹಾಣ್ ತೆಗೆಸಿಕೊಂಡ ಫೋಟೋಗಳು ವೈರಲ್ ಆಗಿದೆ. ಸಂತ್ರಸ್ಥೆಯಿಂದ ಸ್ಥಳ ಮಹಜರು ಬಳಿಕ ಮಾಜಿ ಸಚಿವ ಚೌಹಾಣ್ ಪುತ್ರನಿಗೆ ನೋಟಿಸ್ ಸಾದ್ಯತೆವಿದ್ದು ವಿಚಾರಣೆಗೆ ನೋಟಿಸ್ ನೀಡಿದ ಬಳಿಕ ಬಂಧನದ ಸಾಧ್ಯತೆವಿದೆ ಎಂದು ಮೂಲಗಳು ತಿಳಿಸಿವೆ.