ಬೀದರ್ : ಮದುವೆಗೆ ಸಂಬಂದಿಸಿದ ಬೀಗರ ನಡುವೆ ವ್ಯಾಜ್ಯ ಈ ಹಿಂದೆ ನಡೆದಿದ್ದು ಘಟನೆಯಲ್ಲಿ ಮೈ-ಕೈ ಹೊಡೆದು ಬಿದ್ದಿದ್ದ ಘಟನೆ ಮಾಜಿ ಸಚಿವ ಪ್ರಭು ಚೌಹಾಣ್ ನಿವಾಸದಲ್ಲಿ ಹಲವು ದಿನಗಳ ಹಿಂದೆ ನಡೆದಿತ್ತು.

ಇದೀಗ ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್.ಐಆರ್. ದಾಖಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ಥೆ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಮೊದಲು ಇನಸ್ಟಾಗ್ರಾಂನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು ಬಳಿಕ ಪ್ರೀತಿಯಾಗಿದ್ದು ಮದುವೆಯಾಗುವುದಾಗಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ನಿಶ್ಚಿತಾರ್ಥಕ್ಕೂ ಮೊದಲು ಪ್ರತೀಕ್ ಚೌಹಾಣ್ ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆದುಕೊಂಡಿ ಹೋಗಿದ್ದು ಅಂದು ಲೈಂಗಿಕ ಕ್ರಿಯೆಗೆ ಸಹಕರಿಸು ಎಂದ್ರೆ ನಾನು ಮದುವೆಯಾಗದ ಮೇಲೆ ಸಹಕರಿಸುತ್ತೆನೆ ಅಂತಾ ಹೇಳಿದ್ದು ಆದರೂ ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ಥೆ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾಳೆ.
ಬೆಂಗಳೂರಿನ ಹೋಟೆಲ್ ನಲ್ಲಿ ಇಬ್ಬರು ತಂಗಿದ್ದ ಬಗ್ಗೆ ದಾಖಲೆ ಪಡೆದಿದ್ದು ಇದಾದ ನಂತರ ನಿಶ್ಚಿತಾರ್ಥವಾಗಿದ್ದು ಮದುವೆ ಮಾಡಿ ಎಂದರೆ ಮಳೆಗಾಲ ಇದೆ ನೋಡೋಣ ಎಂದು ತಡೆಯುತ್ತಾ ಬಂದಿದ್ದು ಮತ್ತೆ ಮಹಾರಾಷ್ಟ್ರದ ಲಾತೂರಿನಲ್ಲೂ ಖಾಸಗಿ ಹೋಟೆಲ್ ಗೆ ಕರೆದುಕೊಂಡು ಹೋಗಿ ಒತ್ತಾಯ ದಿಂದ ಅತ್ಯಾಚಾರ ಮಾಡಿದ್ದಾರೆ ಈಗ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯ ನಡೆಸಿ ಇಂದು ಮದುವೆಯಾಗಲ್ಲಾ ಎನ್ನುತ್ತಿದ್ದಾರೆ ಎಂದು ದೂರಿನಲ್ಲಿದೆ.
ಎಫ್ಐರ್ ದಾಖಲಾದ ಬಳಿಕ ಪೊಲೀಸ್ ಭದ್ರತೆಯಲ್ಲಿ ಸಂತ್ರಸ್ಥೆಯನ್ನು ಮಹಿಳಾ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು ಎಫ್ಐಆರ್ ದಾಖಲು ಬಳಿಕ ಪ್ರತಿಕ್ರಿಯೆಗೆ ಸಂತ್ರಸ್ಥೆ ಕುಟುಂಬದವರು ನಿರಾಕರಿಸಿದ್ದು ಸಂತ್ರಸ್ಥೆ ಮತ್ತು ಕುಟುಂಬದಿಂದ ನಾಳೆ ಬೀದರ್ ನಲ್ಲಿ ಸುದ್ದಿಗೋಷ್ಠಿ ಸಾಧ್ಯತೆವಿದೆ ಎಂದು ಮಾಹಿತಿ ದೊರೆತಿದೆ.