ಬೀದರ್ : ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಗೆ, ಮನೆ ಅಲಂಕಾರ ದೀಪಾವಳಿ ಹಬ್ಬಕ್ಕೆ ಬಹು ಬೇಡಿಕೆಯ ಚಂಡು ಹೂ ಈ ಬಾರೀ ಬಾಡಿ ಹೋಗಿದೆ,ಬೇಡಿಕೆ ಇರುವ ಹೂವು ಬೆಳೆಸಿದರೆ ಚನ್ನಾಗಿ ಆದಾಯ ಬರಬಹುದು ಅನ್ನುವ ನಿರೀಕ್ಷೆಯಲ್ಲಿ ಚೆಂಡು ಹೂವು ಬೆಳೆಸಿದ್ದ ರೈತರು ಚೆನ್ನಾಗಿ ಬೆಳೆದ ಹೂಗಳನ್ನ ಕಂಡು ಸಂತೋಷ ಪಟ್ಟಿದ್ರು ಆದ್ರೆ ದಿಢೀರನೆ ಬಾಡಿದ ಹೂಗಳನ್ನ ನೋಡಿ ಹೈರಣ್ ಆಗಿದ್ದಾರೆ.
ಬೀದರ ಜಿಲ್ಲೆ ಭಾಲ್ಕಿ ಭಾತಂಬ್ರಾ ಗ್ರಾಮದ ರೈತ ಸಚಿನ ಮೇಳಕುಂದೆ, ಮಹಾಂತೇಶ ಡಿಗ್ಗೆ , ಸಿದ್ರಾಮ ಕೊರಾಳೆ ಹೂಲದಲ್ಲಿ ಬಾಡಿ ಹೋದ ಚಂಡು ಹೂವುಗಳು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಒಳ್ಳೆ ರೀತಿಯಲ್ಲಿ ಬೆಳೆದು ಅರಳಿ ನಿಂತ ಹೂಗಳು ದಿಢೀರನೆ ಬಾಡಿಹೋಗಿದ್ದು ,ಈ ಬಾರಿಯ ದೀಪಾವಳಿಗೆ ದೀಪಾವು ಆರಿದಂತಾಗಿದೆ.
ದೀಪಾವಳಿಗೆ ಮಾರುಕಟ್ಟೆಗೆ ಹೋಗಬೇಕಾದ ಹೂವು ಗಿಡದಲ್ಲಿಯೇ ಬಾಡಿವೆ ಕಾರಣ ತಿಳಿಯದೆ ಹೈರಾಣದ ಅನ್ನದಾತರು ಸರ್ಕಾರದಿಂದ ಪರಿಹಾರ ನಿರೀಕ್ಷೆಯಲ್ಲಿದ್ದು ,ಸರಕಾರ ಬರ ಪರಿಹಾರದಂತೆ ಇವರಿಗೂ ಒಂತಿಷ್ಟೂ ಪರಿಹಾರ ಕೊಟ್ಟರೆ ರೈತರ ಮೊಗದಲ್ಲಿ ಈ ಸಲ ಸಂತೋಷ ಮೂಡಾಬಹುದೆಂಬುದು ಅನಿಸಿಕೆ.


