ಬೀದರ್ ; ಬೀದರ್ ಬ್ರೀಮ್ಸ್ ನಲ್ಲಿ ಕೆಲವೊತ್ತು ಕರೆಂಟ್ ಇಲ್ಲದೆ ರೋಗಿಗಳು ಪರದಾಟವಾದ ಘಟನೆ ನಡೆದಿದೆ. ಬ್ರೀಮ್ಸ್ ನ ನಾಲ್ಕನೇ ಮಹಡಿ ಯಲ್ಲಿರುವ ಮಕ್ಕಳ ವಾರ್ಡ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಎರಡು ತಾಸು ವಿದ್ಯುತ್ ಇಲ್ಲದೆ ರೋಗಿಗಳು ಸಂಕಷ್ಟ ಅನುಭವಿಸಿದ್ದು ವಿದ್ಯುತ್ ಇಲ್ಲದೆ ಕೆಲವೊತ್ತು ಮಕ್ಕಳಿಗೆ ಮೊಬೈಲ್ ಟಾರ್ಚ್ ನಲ್ಲೇ ಚಿಕಿತ್ಸೆ ಸಿಬ್ಬಂದಿಗಳು ನೀಡಿದ್ದಾರೆ.
ವಿದ್ಯುತ್ ಇಲ್ಲದೆ ಕತ್ತಲ್ಲೇ ಕಾಲ ಕಳೆದ ರೋಗಿಗಳು ಆಕ್ರೋಶ ಹೊರಹಾಕಿದ್ದು ನಿನ್ನೆ ಕೂಡಾ ಇದೇ ರೀತಿ ತಡರಾತ್ರಿ ಕರೆಂಟ್ ಇಲ್ಲದೆ ಪರದಾಡಿದ ಮಾಹಿತಿ ನೀಡಿದ್ದಾರೆ. ಬ್ರೀಮ್ಸ್ ಮಕ್ಕಳ ವಾರ್ಡ್ ನಲ್ಲಿ೨೦ ರಿಂದ ೩೦ ಮಕ್ಕಳು ದಾಖಲಾಗಿದ್ದು ರೋಗಿಗಳು ಆಕ್ರೋಶಗೊಳ್ಳುತ್ತಿದ್ದಂತ್ತೆ ಜೆಸ್ಕಾಂ ಸಿಬ್ಬಂದಿಗಳನ್ನು ಕರೆಯಿಸಿ ಆಕ್ರೋಶದ ಬಳಿಕ ಸಿಬ್ಬಂದಿಗಳು ವಿದ್ಯುತ್ ದುರಸ್ತಿ ಮಾಡಿದ್ದಾರೆಂದು ಮಾಹಿತಿ ದೊರೆತಿದೆ.


