ಬೀದರ್ : ಬಸವಕಲ್ಯಾಣ ನಗರದ ಶಿವಾಜಿ ನಗರದಲ್ಲಿ ಇರುವ ಕರ್ನಾಟಕ ಬ್ಯಾಂಕ್’ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಕಳ್ಳತನ ನಡೆದಿದೆ.
ಗುರುವಾರ ನಸುಕಿನ ಜಾವ ಗ್ಯಾಸ್ ಕಟರ್’ನಿಂದ ಎಟಿಎಂ ಯಂತ್ರ ಒಡೆದು ಸುಮಾರು 6.50 ಲಕ್ಷ ರೂ. ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ಹುಮನಾಬಾದ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಸೇರಿದಂತೆ ಬಸವಕಲ್ಯಾಣ ನಗರ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


