ಬೀದರ್ : ಜಿಲ್ಲೆಯ ಹುಲಸೂರ ತಾಲ್ಲುಕಿನಲ್ಲಿ ಬರುವ ಹುಲಸೂರು-ಬಸವಕಲ್ಯಾಣ ಮುಖ್ಖ ರಸ್ತೆಯ ಎಂ.ಕೆ ಪಾರಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಹತ್ತಿರ ಶನಿವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಡು ಜಿಂಕೆ ಸಾವನ್ನಪ್ಪಿರುವ ಘಟನೆ ಜರುಗಿದೆ.
ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ತಗ್ಗಿನಲ್ಲಿ ಸಾವನ್ನಪಿರುವ ಜಿಂಕೆ ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾರೆ.
ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಸಂತೋಷ ಯಾಚೆ ಹಾಗೂ ಗಸ್ತು ಪಾಲಕ ಮಹೇಶ ಮತ್ತು ಸಾರ್ವಜನಿಕರು ಭೇಟಿ ನೀಡಿ ಮೇಲ್ನೋಟಕ್ಕೆ ಅಪಘಾತ ಸಂಭವಿಸಿ 8 ವರ್ಷದ ಗಂಡು ಜಿಂಕೆ ಸಾವನಪ್ಪಿದೆ ಆದರೆ ಅದರ ಕೊಂಬುಗಳು ಕಾಣುತ್ತಿಲ್ಲ. ವನ್ಯ ಪ್ರಾಣಿ ಹೇಗೆ ಸಾವನಪ್ಪಿದೆ ಎಂಬುದರ ಬಗ್ಗೆ ತನಿಖೆ ನಂತರ ಗೊತ್ತಾಗಲಿದೆ.
ಬಸವಕಲ್ಯಾಣದ ಪಶು ಆಸ್ಪತ್ರೆಗಳಲ್ಲಿ ಶವ ಪರೀಕ್ಷೆ ಮಾಡಿ ನಂತರ ನ್ಯಾಯಾಲಯದ ಅನುಮತಿ ಪಡೆದು ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಉಪ ವಲಯ ಅರಣ್ಯ ಅಧಿಕಾರಿ ಸಂತೋಷ ಯಾಚೆ ತಿಳಿಸಿದ್ದಾರೆ. ಸಾವನಪ್ಪಿರುವ ಜಿಂಕೆಯನ್ನು ಅರಣ್ಯ ಅಧಿಕಾರಿಗಳು ಬಸವಕಲ್ಯಾಣದ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.


