ಬೀದರ್ : ಜಿಲ್ಲೆಯ ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಧಾನ್ಯ ಸಾಗಿಸುತ್ತಿದ್ದ ಖಾಸಗಿ ಟಂಟಂ ಮತ್ತು ಆರೋಪಿಯನ್ನು ಪೊಲೀಸರ ವಶಕ್ಕೆ ಪಡೆದರು.
ಬೇಲೂರ ಗ್ರಾಮದ ಸಂಗಪ್ಪಾ ಕಲ್ಲಪ್ಪ ಕವಟೆ ಹಾಗೂ ಆಕಾಶ ಸಂಗಪ್ಪ ರೊಂಟೆ ಬಂಧಿತರು. ₹ 56,350 ಮೌಲ್ಯದ 2450 ಕೆ.ಜಿ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ನೋಂದಣಿ ಸಂಖ್ಯೆ KA 56 5244 ಖಾಸಗಿ ಟಂಟಂದಲ್ಲಿ 50 ಕೆ.ಜಿ.ತೂಕವಿರುವ 49 ಚೀಲದ ಮೂಟೆಗಳನ್ನು ಹೊತ್ತು ಖಾಸಗಿ ಟಂಟಂದಲ್ಲಿ ಸಾಗಿಸುತ್ತಿದ್ದ. ಖಚಿತ ಮಾಹಿತಿ ಪಡೆದು, ಟಂಟಂ ತಡೆದು ಆರೋಪಿ ವಿಚಾರಣೆ ಮಾಡಿದಾಗ, ಗ್ರಾಹಕರಿಂದ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 3&7 ಯಡಿ ದೂರು ಸಲ್ಲಿಸಲಾಗಿದೆ ಎಂದು ಎಎಸ್ಐ ಶಾವರಾಜ ಯಾದವ ತಿಳಿಸಿದ್ದಾರೆ. ಹುಲಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.


