Wednesday, February 5, 2025
Flats for sale
Homeರಾಜ್ಯಬಾಗಲಕೋಟೆ : ಲಕ್ಷಾಂತರ ಹಣ ಪಡೆದು ಮದುವೆ ಮಾಡಿಸಿದ ಬ್ರೋಕರ್ : ಒಂದೇ ತಿಂಗಳಲ್ಲಿ ಪತ್ನಿ,ಬ್ರೋಕರ್...

ಬಾಗಲಕೋಟೆ : ಲಕ್ಷಾಂತರ ಹಣ ಪಡೆದು ಮದುವೆ ಮಾಡಿಸಿದ ಬ್ರೋಕರ್ : ಒಂದೇ ತಿಂಗಳಲ್ಲಿ ಪತ್ನಿ,ಬ್ರೋಕರ್ ಎಸ್ಕೇಪ್,ದೂರು ದಾಖಲು ..!

ಬಾಗಲಕೋಟೆ : ಈ ಸಮಾಜದಲ್ಲಿ ಎಂಥೆಲ್ಲಾ ಜನಗಳು ಇದ್ದರೋ ಹೇಳಲು ಅಸಾಧ್ಯ. ಲಕ್ಷಾಂತರಹಣ ಪಡೆದು ಮದುವೆ ಮಾಡಿಸಿ ಬಳಿಕ ಬ್ರೋಕರ್ ಹಾಗೂ ಪತ್ನಿ ಎಸ್ಕೇಪ್ ಆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವಯಸಾದರು ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿದ್ದ ವ್ಯಕ್ತಿಗೆ ಮದುವೆ ಮಾಡಿಸಿ ಲಕ್ಷಾಂತರ ಹಣ ಪಡೆದು ಬ್ರೋಕರ್ ವಂಚಿಸಿರುವ ಘಟನೆ ನಡೆದಿದೆ. ಮದುವೆ ಬಳಿಕ ಬ್ರೋಕರ್ ಮತ್ತು ವಿವಾಹವಾದ ಹೆಣ್ಣು ಇಬ್ಬರೂ ಪರಾರಿಯಾಗಿದ್ದಾರೆ. ಶಿವಮೊಗ್ಗದ ಮಂಜುಳಾ ಎಂಬಾಕೆಯನ್ನು ಮದುವೆ ಮಾಡಿ ಮೋಸ ಮಾಡಿದ್ದಾರೆಂದು ದೂರಿದ್ದಾರೆ. ಮುಧೋಳದ ಸೋಮಶೇಖರ್ ಎಂಬಾತ ಮೋಸ ಹೋಗಿದ್ದಾರೆ. ತನಗಾದ ವಂಚನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಈ ಮಾಡುವೆ ಪ್ರೀ ಪ್ಲಾನ್ಡ್ ಆಗಿದ್ದು ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಬ್ರೋಕರ್ ಟೀಂ ಕರೆ ತಂದಿತ್ತು. ಬಾಗಲಕೋಟೆ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆ ನಡೆದಿತ್ತು. ಮದುವೆ ದಿನವೇ ಬ್ರೋಕರ್ ತಂಡವು ಪೂರ್ಣ 4 ಲಕ್ಷ ಹಣ ಪಡೆದಿತ್ತು. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಾಳೆ . ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಆಕೆಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಬ್ರೋಕರ್ ಟೀಮ್‌ಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಸಂತ್ರಸ್ತ ಸೋಮಶೇಖರ್, ಪೊಲೀಸರ ಬಳಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular