ಬಾಗಲಕೋಟೆ : ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದು ಪ್ರಿಯಕರನು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಪವಿತ್ರ ಪವಿತ್ರಾ ರಾಜಶೇಖರ (19) ಹಾಗೂ ಕಾರ್ತಿಕ ಚನ್ಬಪ್ಪ ನಾಯಕ (21) ಮೃತಪಟ್ಟ ಪ್ರೇಮಿಗಳು.
ಮದುವೆ ಮಾಡಿಕೊಳ್ಳುವ ವಿಚಾರವಾಗಿ ಮನೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ಇಬ್ಬರೂ ಪ್ರೇಮಿಗಳು ಚರ್ಚೆ ಮಾಡುವಾಗ ಗಲಾಟೆ ಮಾಡಿಕೊಂಡಿದ್ದಾರೆ.ಇದರಿಂದ ಮನನೊಂದ ಯುವತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಬಗ್ಗೆ ಭಯಗೊಂಡ ಪ್ರೀಯಕರನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೊದಲು ಇಬ್ಬರ ಮಧ್ಯೆ ಗಲಾಟೆ ಆಗಿದ್ದು ಬಳಿಕ ಇಬ್ಬರು ಪ್ರತ್ಯೇಕ ಕಡೆ ಆತ್ಮಹತ್ಯೆಮಾಡಿಕೊಂಡಿದ್ದಾರೆ.ಈ ಬಗ್ಗೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಭೇಟಿನೀಡಿದ್ದು ಪಾಲಕರು ಏನು ದೂರು ನೀಡುತ್ತಾರೆ ಅದರ ಪ್ರಕಾರ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


