ಬಾಗಲಕೋಟೆ : ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದ್ದು ಮುಧೋಳ್ ನಗರದ ಗಾಂಧಿ ಚೌಕ್ನಲ್ಲಿ ಸೈಕೋ ಅಣ್ಣನೊಬ್ಬ ಮಲಗಿದ್ದ ತಮ್ಮನ ಮುಖಕ್ಕೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ವರದಿಯಾಗಿದೆ.
ಮೃತ ರ್ದುದೈವಿ ಸುನಿಲ್ ರಜಪೂತ(24) ಎಂದು ತಿಳಿದುಬಂದಿದೆ,ತಮ್ಮ ಸುನಿಲ್ ರಾತ್ರಿ ನಿದ್ದೆಯಲ್ಲಿದ್ದಾಗ,ಆರೋಪಿ ಅಣ್ಣ ಸುಖೇನ್ ಸಿಂಗ್ ರಜಪೂತ್ ಕೊಲೆ ಮಾಡಿದ್ದಾನೆ. ಬಳಿಕ ಸ್ಮಶಾನಕ್ಕೆ ಹೋಗಿ ಪಕ್ಕದಲ್ಲಿನ ಘಟಪ್ರಭಾ ನದಿಯಲ್ಲಿ ಸ್ನಾನ ಮಾಡಿ ನಂತರ ಹಣೆಗೆ ಭಸ್ಮ ಧರಿಸಿಕೊಂಡು ಹುಚ್ಚುತನ ಮೆರೆದಿದ್ದು ಸ್ಥಳೀಯರು ಆರೋಪಿಯ ಬಗ್ಗೆ ಆರೋಪಿಯ ಬಗ್ಗೆ ಆಶ್ಚರ್ಯಕರವಾಗಿ ಮಾಹಿತಿ ನೀಡಿದ್ದಾರೆ.
ಕುಟುಂಬದಲ್ಲಿ ಸಮಸ್ಯೆಯಿದ್ದು ತಂದೆ ಪಿ ಡಬ್ಲ್ಯುಡಿಯಲ್ಲಿ ಡಿ ದರ್ಜೆ ನೌಕರನಾಗಿ ನಿವೃತ್ತಿಯಾಗಿದ್ದಾರೆ. ಸುನಿಲ್ ಬಿ.ಕಾಮ್ ಪದವೀಧರ, ಸುಖೇನ್ ಸಿಂಗ್ ಚಿತ್ರಕಲೆ ಓದಿದ್ದಾನೆ. ಸುಖೇನ್ ಕಳೆದ ಐದಾರು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮನೆಯಲ್ಲಿ ಕೆಲಸ ಮಾಡದೆ ಹುಚ್ಚುನಂತೆ ವರ್ತನೆ ತೋರುತ್ತಿದ್ದ. ತಂದೆ-ತಾಯಿ ಆತನಿಗೆ ಬೈದು ಬುದ್ದಿ ಹೇಳುತ್ತಿದ್ದರು. ಆದರೆ ತಂದೆ-ತಾಯಿ, ಅಜ್ಜಿ ಎಲ್ಲರೂ ತೊಟ್ಟಿಲು ಕಾರ್ಯಕ್ಕೆ ಎಂದು ಎಪ್ರಿಲ್ 15 ರಂದು ರಾಯಚೂರಿಗೆ ಹೋಗಿದ್ದು ಅದೇ ದಿನ ರಾತ್ರಿ 11.20 ರ ಸುಮಾರಿಗೆ ಸುಖೇನ್ ಈ ಭಯಾನಕ ಕೃತ್ಯವೆಸಗಿದ್ದಾನೆ. ಆತನ ಹುಚ್ಚುತನ ಒಡ ಹುಟ್ಟಿದ ತಮ್ಮನನ್ನೇ ಬಲಿ ಪಡೆದಿದ್ದು ಕುಟುಂಬದ ಸದಸ್ಯರಿಗೆ ದಿಗಿಲುಬಡಿದಂತಾಗಿದೆ.
ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ .