ಬಾಗಲಕೋಟೆ; ದೆಹಲಿ ಮಾದರಿಯಲ್ಲಿ ತಂದೆಯನ್ನು 30 ತುಂಡುಗಳಾಗಿ ಕತ್ತರಿಸಿದ ಭೀಕರ ಕೊಲೆ ರಾಜ್ಯದಲ್ಲೂ ನಡೆದಿದೆ.ಮಗನೇ ತನ್ನ ತಂದೆಯನ್ನು ಕೊಂದು ದೇಹವನ್ನು 30 ತುಂಡುಗಳಾಗಿ ಕತ್ತರಿಸಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಹೊರವಲಯದ ಪರಶುರಾಮಪ್ಪ ಕುಳಲಿ (54) ಮೃತ ದುರ್ದೈವಿ .
ಮಗ ವಿಠ್ಠಲ ಕುಳಲಿ ರಾಡ್ ನಿಂದ ಹೊಡೆದು ಕೊಲೆ ಮಾಡಿ ದೇಹವನ್ನು 30 ಭಾಗಗಳಾಗಿ ಕತ್ತರಿಸಿ ಹಳೆಯ ಬೋರ್ವೆಲ್ ನಲ್ಲಿ ಅಂಗಾಂಗಗಳನ್ನು ಹಾಕಿದ್ದಾನೆ ಎಂದು ಮುಧೋಳ ಪೊಲೀಸರು ತಿಳಿಸಿದ್ದಾರೆ .
ಮೃತರ ಪತ್ನಿ ಸರಸ್ವತಿ ದೂರಿನ ಅನ್ವಯ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ