Monday, February 2, 2026
Flats for sale
Homeರಾಜ್ಯಬಾಗಲಕೋಟೆ : ಟೊಮೇಟೊ,ಈರುಳ್ಳಿ ಆಯ್ತು ಈಗ ಕೆಂಪು ಮೆಣಸಿನಕಾಯಿಯ ಸರದಿ,ಬರ,ಬೆಲೆಯೇರಿಕೆಯ ನಡುವೆ ಕಳ್ಳರ ಕಾಟ,ಕಂಗಲಾದ ರೈತರು.

ಬಾಗಲಕೋಟೆ : ಟೊಮೇಟೊ,ಈರುಳ್ಳಿ ಆಯ್ತು ಈಗ ಕೆಂಪು ಮೆಣಸಿನಕಾಯಿಯ ಸರದಿ,ಬರ,ಬೆಲೆಯೇರಿಕೆಯ ನಡುವೆ ಕಳ್ಳರ ಕಾಟ,ಕಂಗಲಾದ ರೈತರು.

ಬಾಗಲಕೋಟೆ : ರಾಜ್ಯದಲ್ಲಿ ಈ ಬಾರಿ ಬರದ ನಡುವೆ ಬೆಳೆಗಳು ಹಾನಿಗೊಂಡು ದಾಸ್ತಾನು ಇಲ್ಲದ ಹಿನ್ನೆಲೆ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಬಾಗಲಕೋಟೆತಾಲೂಕಿನಲ್ಲಿ ಇದೀಗ ಕೆಂಪು ಮೆಣಿಸಿನಕಾಯಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಕಳ್ಳರ ಕಾಟ ಶುರುವಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಳ್ಳರು ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಕದಿಯುತ್ತಿದ್ದಾರೆ. ಟೊಮೆಟೋ, ಈರುಳ್ಳಿ ಬೆಳೆಗಳ ಬೆಲೆ ಏರಿಕೆ ಯಗಿದ್ದಾಗಲೂ ಈ ತರಕಾರಿಗಳು ಕಳ್ಳತನವಾಗುತ್ತಿತ್ತು ಆದರೆ ಈ ಕಳ್ಳರು ಎಲ್ಲಿ ಬೆಲೆ ಜಾಸ್ತಿಯಾಗಿದೆಯೋ ಆ ಕಾಲಕ್ಕೆ ತಕ್ಕ ಕಳ್ಳತನ ಮಾಡಲು ಪ್ರಾರಂಭಿಸಿದ್ದಾರೆ.

ರೈತರು ಕಷ್ಟ ಪಟ್ಟು ಬೆಳೆಸಿದ ಬೆಳೆಯನ್ನು ರಾತ್ರೆಹೊತ್ತು ಕಾಯುವ ಪರಿಸ್ಥಿತಿ ಉಂಟಾಗಿದೆ. ಹಗಲು ರಾತ್ರಿಯೆನ್ನದೇ ಕಳ್ಳರು ರೈತರಿಲ್ಲದ ವೇಳೆ ಹೊಲಕ್ಕೆ ನುಗ್ಗಿ ಕ್ವಿಂಟಲ್ ಗಟ್ಟಲೇ ಮೆಣಸಿನಕಾಯಿಗಳನ್ನು ಕದ್ದೊಯ್ಯುತ್ತಿದ್ದು, ಮನ್ನಿಕಟ್ಟಿ, ಬೆನಕಟ್ಟಿ, ಬೇವೂರು, ಹಳ್ಳೂರು ಭಗವತಿ ಗ್ರಾಮದ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಜೋರಾಗಿದೆ. ಮೆಣಸಿನಕಾಯಿ ಬೆಲೆ ಗಗನಕ್ಕೆ ಏರಿದ ಸಂದರ್ಭದಲ್ಲಿ ಕಳ್ಳರು ಮೆಣಸಿನಕಾಯಿ ಕಳ್ಳತನ ಮಾಡುತ್ತಿರುವುದು ರೈತರ ನಿದ್ದೆಗೆಡಿಸಿದೆ. ಹಗಲು ರಾತ್ರಿಯೆನ್ನದೇ ಬೆಳೆ ಕಾಯುವ ಸ್ಥಿತಿ ಬಂದಿದೆ.

ಮನ್ನಿಕಟ್ಟಿ ವ್ಯಾಪ್ತಿಯಲ್ಲಿ ಹೊನ್ನಾಕಟ್ಟಿ ಗ್ರಾಮದ ರೈತ ಹನುಮಂತಪ್ಪ ಗೌಡರ ಮನ್ನಿಕಟ್ಟಿ ವ್ಯಾಪ್ತಿಯಲ್ಲಿ ಇರುವ ತನ್ನ ಒಂದು ಎಕರೆ ಹೊಲ ಮತ್ತು ವರ್ಷಕ್ಕೆ 15 ಸಾವಿರದಂತೆ ಬೋಗ್ಯಕ್ಕೆ (rent) ಮೇಲೆ ಪಡೆದ ಇನ್ನೊಂದು ಎಕರೆ ಹೊಲದಲ್ಲಿ ಕೆಂಪು ಮೆಣಸು ಕೃಷಿ ಮಾಡಿದ್ದಾರೆ. ಆದರೆ ಅಮವಾಸ್ಯೆ ದಿನ ಹೊಲಕ್ಕೆ ನುಗ್ಗಿದ ಕಳ್ಳರು ಎರಡು ಕ್ವಿಂಟಲ್​ನಷ್ಟು ಬೆಳೆ ಕದ್ದೊಯ್ದಿದ್ದಾರೆ. ಪರಿಣಾಮ ರೈತ ಹನುಮಂತಪ್ಪ ಅವರು ಒಂದು ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ್ದಾರೆ.

ಈ ಬಾರಿ ಮುಂಗಾರು ಹಿಂಗಾರು ಎರಡು ಮಳೆ ಕೈ ಕೊಟ್ಟಿದ್ದರಿಂದ ಪ್ರತಿಶತ 80 ರಷ್ಟು ಮೆಣಸಿನ ಗಿಡಗಳು ಒಣಗಿ ಹಾಳಾಗಿವೆ. ಕೆಲ ರೈತರು ಟ್ಯಾಂಕರ್ ಮೂಲಕ ನೀರುಣಿಸಿ ಮೆಣಸಿನ ಗಿಡಳನ್ನು ಮಗುವಿನಂತೆ ಜೋಪಾನ ಮಾಡಿಕೊಂಡಿದ್ದಾರೆ.ಆದರೂ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನ ಗಿಡಗಳನ್ನು ಬೆಳೆಯಲಾಗಿದೆ.

ಒಣಗಿದ ಕೆಂಪು ಮೆಣಸಿನಕಾಯಿ ಕ್ವಿಂಟಲ್​ಗೆ 60 ಸಾವಿರ ಬೆಲೆ ಬಂದಿದೆ. ಇಳುವರಿಯಿಲ್ಲದ ಕಾರಣ ಮೆಣಸಿನಕಾಯಿ ಬೆಲೆ ಗಗನಕ್ಕೆ ಏರಿದೆ. ಮೆಣಸಿನ ಕಾಯಿಗೆ ಚಿನ್ನದ ಬೆಲೆ ಬಂದಿದ್ದು ಕೆಂಪು ಸುಂದರಿ ಕೆಂಪು ಮೆಣಸಿನಕಾಯಿ ಕಳ್ಳರ ಕಣ್ಣು ಕುಕ್ಕುತ್ತಿದ್ದು, ಮೆಣಸಿನಕಾಯಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular