ಬಾಗಲಕೋಟೆ : ರಾಜ್ಯದಲ್ಲಿ ಇತ್ತೀಚ್ಚಿಗೆ ಒಂದಲ್ಲ ಒಂದು ರೀತಿಯಲ್ಲಿ ವಿಕೃತಿ ಮೆರೆಯುವ ಘಟನೆಗಳು ನಡೆಯುತ್ತಲೇ ಇದೆ .ಇದಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಮುಖ್ಯ ಕಾರಣವೆಂದು ತಜ್ಞರು ತಿಳಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದ ರೀತಿಯಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನ ಬರಮಪ್ಪ ಎಂಬುವರಿಗೆ ಸೇರಿದ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.
ಬೆಳಗಿನ ಜಾವ, ಹಸುವಿನ ಮಾಲಿಕ ಭರಮಪ್ಪ ಅವರು ತಮ್ಮ ಕೊಟ್ಟಿಗೆಯಲ್ಲಿ ದಿನಚರಿಯ ಕೆಲಸಗಳಲ್ಲಿ ನಿರತರಾಗಿದ್ದ ವೇಳೆ, ಹಸು ರಕ್ತದಿಂದ ನರಳುತ್ತಿರುವ ದೃಶ್ಯ ಅವರನ್ನು ಬೆಚ್ಚಿಬೀಳಿಸಿತು.ದುಷ್ಕರ್ಮಿಗಳು ಗರ್ಭಾವಸ್ಥೆಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ಹಸುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹಸುವಿನ ಕೆಚ್ಚಲ ಕತ್ತರಿಸಿದ ದುಷ್ಕರ್ಮಿಗಳು ಮನುಷ್ಯರಾಗಿಲ್ಲ, ಪಾಪಿಗಳೇ’ ಎಂಬ ಮಾತುಗಳು ಗ್ರಾಮಸ್ಥರು ಅಕ್ರೋಶಹೊರಹಾಕಿದ್ದಾರೆ. ಸ್ಥಳೀಯರು ಮತ್ತು ಹಸುವಿನ ಮಾಲಿಕ ಕುಟುಂಬ, ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹಮನುಷ್ಯತ್ವವನ್ನೇ ಕಳೆದುಕೊಂಡಂತೆ ಈ ಕ್ರೂರ ಕಾರ್ಯಾಚರಣೆಯನ್ನು ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಭರಮಪ್ಪ ಕುಟುಂಬದವರು ಬಾದಾಮಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.