ಬಾಗಲಕೋಟೆ : ಕುಡಿತದ ಚಟಕ್ಕೆ ದಾಸನಾಗಿದ್ದ ಮಗ ನಿಂದಲೇ ಹೆತ್ತ ತಾಯಿಯ ಕೊಲೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.
ಶ್ರೀಮತಿ ಶಾವಕ್ಕಾ (ಸುಮಾರು 60 ವರ್ಷದ) ಮೃತ ಮಹಿಳೆ.
ಬೀಳಗಿ ತಾಲೂಕಿನ ಬಾವಲತ್ತಿ ಗ್ರಾಮದ ಮೂಲದವರಾದ ಇವರು ತುಳಸಿಗೇರಿ ಗ್ರಾಮದ ಬಾಡಗಿ ಮನೆಯಲ್ಲಿ ವಾಸ ಮಾಡುತ್ತಿದ್ದರು.ತಮ್ಮ ಮಗ ಯಂಕಪ್ಪ s/o ರಂಗಪ್ಪ ಗಿರಿ ಸಾಗರ್ ಜೊತೆ, ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು… ಆರೋಪಿತ ಯಂಕಪ್ಪ ಕುಡಿಯುವ ಅಭ್ಯಾಸ ಹೊಂದಿದ್ದು, ಹಣದ ವಿಚಾರದಲ್ಲಿ ತಾಯಿಯೊಂದಿಗೆ ಹೆಚ್ಚಾಗಿ ವಾಗ್ವಾದ ಮಾಡುತ್ತಿದ್ದ.ಆದರೆ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದು ಮನೆಗೆ ಬೀಗ ಹಾಕಿ ಹೊರಟುಹೋಗಿದ್ದನು.
ಆರೋಪಿತ ಮಗ ಯಂಕಪ್ಪ ಪೊಲೀಸರು ವಶಕ್ಕೆ ಪಡೆದು ಕೊಂಡು ವಿಚಾರ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಎಸ್.ಪಿ., ಡಿ.ಎಸ್.ಪಿ., ಮತ್ತು ಸಿ.ಪಿಐ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.