ಬಳ್ಳಾರಿ : ಇಲ್ಲಿನ ಮಹಾ ನಗರ ಪಾಲಿಕೆಯ ಆವರಣದಲ್ಲಿರುವ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರದಲ್ಲಿ 25 ಲಕ್ಷ ರೂ ನಗದು ಮತ್ತು ಸಿಸಿಟಿವಿಯ ಡಿವಿಆರ್ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ನಿನ್ನೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳತನ ಪತ್ತೆ ಕಾರ್ಯ ನಡೆದಿದೆ.
ಕಳೆದ ಶುಕ್ರವಾರ, ಶನಿವಾರ, ಭಾನುವಾರ ೯೩ ಲಕ್ಷ ರೂ ಕಲೆಕ್ಷನ್ ಆಗಿತ್ತು. ಶುಕ್ರವಾರ ಮಧ್ಯಾಹ್ನ, ನಂತರ ಶನಿವಾರ ಹಾಗೂ ಭಾನುವಾರವಾಗಿದ್ದರಿಂದ ಹಣವನ್ನು ಬ್ಯಾಂಕಿಗೆ ತುಂಬಿರಲಿಲ್ಲ. ಕಳೆದ 12 ವರ್ಷಗಳಿಂದ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದ್ರಾಳಿನ ಮಹಾಲಿಂಗ ಎಂಬಾತನೇ ಭಾನುವಾರ ಕೊನೆಯದಾಗಿ ಬೀಗ ಹಾಕಿದ್ದಲ್ಲದೆ. ಅದನ್ನು ಈ ಮೊದಲಿನಂತೆ ಆತನೇ ಮನೆಗೆ ತೆಗೆದುಕೊಂಡು ಹೋಗಿದ್ದಾನೆ.
ಮರು ದಿನ ನಿನ್ನೆ ಸೋಮವಾರ ಆತನೇ ಬಾಗಿಲು ತೆರೆದಿದ್ದಾನೆ. ಆದರೆ ಕೇಂದ್ರದಲ್ಲಿನ 25 ಲಕ್ಷ ರೂ ಮಂಗಮಾಯವಾಗಿದೆ. ಆದರೆ ೧೮ ಲಕ್ಷ ರೂ ಹಾಗೇ ಉಳಿದಿದೆ. ವಿಚಿತ್ರ ಎಂದರೆ ಕೇಂದ್ರದ ಬಾಗಿಲು, ಬೀಗ ಮುರಿದಿಲ್ಲ, ಸಿಸಿ ಕ್ಯಾಮರಾ ಹಾಳು ಮಾಡಿಲ್ಲ, ಆದರೆ ಸಿಸಿ ಕ್ಯಾಮರಾಗಳ ಡಿವಿಆರ್ ಕದಿಯಲಾಗಿದೆ.
ಈ ಬಗ್ಗೆ ಪೊಲೀಸರು ಶಂಕೆಯಿಂದ ಮಹಾಲಿಂಗ ಮತ್ತು ಆತನ ಸಂಬAಧಿಕರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇದು ಪಾಲಿಕೆಗೆ ಸಂಬಂದಿಸಿದ ಹಣವಾಗಿರುವುದರಿಂದ ಪೊಲೀಸರು ಪತ್ತೆಹಚ್ಚಬೇಕಾಗಿರುವುದು ಅನಿವಾರ್ಯವಾಗಿದೆ. ಈವರಗೆ ಈ ಪ್ರಕರಣದಲ್ಲಿ ಇನ್ನು ಯಾರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.