ಬಳ್ಳಾರಿ : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣ ತಾರಕ ಕ್ಕೆ ಏರಿತ್ತು ಈ ಹಿನ್ನೆಲೆ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿ ಮಾಜಿ ಎಸ್ಪಿಯವರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದರು ಇದೀಗ ಬಳ್ಳಾರಿ ನೂತನ
ಎಸ್ಪಿಯಾಗಿ ಸುಮನ್ ಫನ್ನೆಕರ್ ರವರು ಅಧಿಕಾರ ಸ್ವೀಕರಿಸಿದ್ದಾರೆ.ಇನ್‌ಚಾರ್ಜ್ ಎಸ್ಪಿ ರಂಜಿತ್ ಕುಮಾರ್ ಬಂಡಾರುರವರು ಅಧಿಕಾರ ಹಸ್ತಾಂತರಿಸಿದ್ದಾರೆ.
ಚಾರ್ಜ್ ತೆಗೆದುಕೊಂಡ ಕೂಡಲೇ ಸುಮನ್ ಪನ್ನೇಕರ್ ರವರು ಅಧಿಕಾರಿಗಳ ಸಭೆ ಕರೆದಿದ್ದು ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಬಳಿಕ ಗಲಭೆ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆವಿದ್ದು ನೂತನ ಎಸ್ಪಿಗೆ ಪೊಲೀಸರಿಂದ ಗೌರವ ಸಲ್ಲಿಸಿದ್ದಾರೆ.


