ಬಳ್ಳಾರಿ : ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ.
ತಬುಸುಮ್ ತಾಜ್ (40) ಬಂಧಿತ ಮಹಿಳೆ. ಮೂಲತಃ ಉಡುಪಿ ನಿವಾಸಿಯಾಗಿರುವ ಆರೋಪಿ ಮಹಿಳೆ. ಒಬ್ಬರಲ್ಲ ಇಬ್ಬರಲ್ಲ ಬರೊಬ್ಬರಿ 8 ಜನರೊಂದಿಗೆ ಸುಳ್ಳು ಹೇಳಿ ನಂಬಿಸಿ ಮದುವೆಯಾಗಿದ್ದಾರೆ. ಬಳಿಕ ಸಾಲ ಕೊಡಿಸೋದಾಗಿ ನಂಬಿಸಿ ಸುಮಾರು 38 ಕೋಟಿಯಷ್ಟು ಹಣ ವಂಚಿಸಿದ್ದಾಳೆಂದರೆ ತಿಳಿದು ಬಂದಿದೆ.
ಹೀನಾ ಎಂಟರ್‍ಪ್ರೈಸಸ್ ಎಂಬ ಆಫೀಸ್ ಮಾಡಿಕೊಂಡು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕೊಡಿಸುತ್ತೇನೆ ಎಂದು ಕಚೇರಿ ಮಾಡಿಕೊಂಡಿದ್ದಳು. 18 ವರ್ಷದಿಂದ ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಳು. ಅಲ್ಲದೇ ಯು.ಟಿ. ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನ ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಜನರನ್ನು ನಂಬಿಸಿದ್ದಳು. ಅದೇ ರೀತಿ ಜೆಡಿಎಸ್ ರಾಜ್ಯ ಮೈನಾರಿಟಿ ಘಟಕದ ಕಾರ್ಯಾಧ್ಯಕ್ಷೆ ಜೊತೆಗೆ ಹೀನಾ ಎಂಟರ್‌ಪ್ರೈಸೆಸ್ ಎಂದು ರಾಜ್ಯದ ವಿವಿಧೆಡೆ ಆಫೀಸ್ ಮಾಡಿಕೊಂಡಿದ್ದ ಖತರ್ನಾಕ್ ವಂಚಕಿ. ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಿಸೋದಾಗಿ ಹೇಳಿ ವಂಚನೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡು ವಂಚನೆಗಿಳಿದಿದ್ದಾಳೆ.
ಯುಟಿ ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ ಅದನ್ನು ವೈಟ್ ಮಾಡಲಿಕ್ಕೆ ಈ ಬ್ಯುಸಿನೆಸ್ ಶುರು ಮಾಡಿದ್ದೇನೆಂದು ಹೇಳಿ ಮುಗ್ಧರನ್ನ ನಂಬಿಸಿದ್ದ ಕಳ್ಳಿ. ಒಂದು ಕೋಟಿ ನಿಮಗೆ ಲೋನ್ ಬೇಕೆಂದ್ರೆ 15 ಲಕ್ಷ ಕೊಡಿ ಸಾಕು. ಹತ್ತು ದಿನದಲ್ಲಿ ಮೈನಾರಿಟಿ ಲೋನ್ ಕೊಡುತ್ತೇನೆಂದು ಮುಗ್ಧ ಜನರ ತಲೆಗೆ ಮದ್ದು ಅರೆದು ವಂಚಿಸುತ್ತಿದ್ದ ಮಹಿಳೆ. ಇದೇ ರೀತಿ ಸುಳ್ಳು ಹೇಳಿ ಸುಮಾರು 38 ಕೋಟಿ ರೂಪಾಯಿ ವಂಚಿಸಿದ್ದಾಳೆ. 1 ಕೋಟಿ ರೂ. ಲೋನ್ ಬೇಕಾದರೆ 15 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್ ಕೊಡಲಾಗುತ್ತೆ ಎಂದು ಭರವಸೆ ನೀಡಿ ವಂಚನೆ ಮಾಡುತ್ತಿದ್ದಳು. ರಾಜ್ಯದಾದ್ಯಂತ 38 ಕೋಟಿ ರೂ.ಗೂ ಅಧಿಕ ಹಣವನ್ನು ಸಾವಿರಾರು ಜನರಿಗೆ ಮೋಸ ಮಾಡಿದ್ದಾಳೆ ಎಂಬುದು ತಿಳಿದು ಬಂದಿದೆ.