Thursday, December 19, 2024
Flats for sale
Homeರಾಜ್ಯಬಳ್ಳಾರಿ : ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ, ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ,ವೆರ್ ಹೌಸ್‌ನಲ್ಲಿ ಪರಿಶೀಲನೆ..!

ಬಳ್ಳಾರಿ : ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ, ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ,ವೆರ್ ಹೌಸ್‌ನಲ್ಲಿ ಪರಿಶೀಲನೆ..!

ಬಳ್ಳಾರಿ : ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರಿದಿದೆ. ತಜ್ಞರ ಸಮಿತಿ IV ಗ್ಲುಕೋಸ್ ಅನ್ನು ಕಾರಣವೆಂದು ವರದಿ ಮಾಡಿದ್ದರೂ, ಸಾವುಗಳು ನಿಲ್ಲುತ್ತಿಲ್ಲ. ಈ ಸಂಬಂಧ ಬಿಜೆಪಿ ನಿಯೋಗವು ಲೋಕಾಯುಕ್ತರಿಗೆ ದೂರು ನೀಡಿದೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಸತ್ಯ ಮುಚ್ಚಿಡುವ ಪ್ರಯತ್ನಗಳನ್ನು ದೂರಿನಲ್ಲಿ ಖಂಡಿಸಲಾಗಿದೆ. ಬಾಣಂತಿಯರ ಸಾವಿನ ಮೂಲ ಕಾರಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಮೂರು ಪ್ರತ್ಯೇಕ ತಂಡವಾಗಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್, ಬಿಮ್ಸ್ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆ ಆವರಣದ ವೆರ್ ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಯ ಔಷಧ ವಿಭಾಗದಲ್ಲಿ ಲೋಕಾಯುಕ್ತ ಪರಿಶೀಲನೆ ಮಾಡಿದೆ. ಐವಿ ಹಾಗೂ ಆರ್‌ಎಲ್ ಫ್ಲೂಯಿಡ್ ಔಷಧಿ ಬಂದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.ಸೀಜ್ ಆಗಿರುವ 280 ಐವಿ ಫ್ಲೂಯಿಡ್ ಆರ್‌ಎಲ್ ಬಾಟಲ್ ಬಗ್ಗೆಯೂ ಮಾಹಿತಿ ಪಡೆದಿದ್ದು ಐವಿ ದ್ರಾವಣ ಹಾಗೂ ಬಾಣಂತಿಯರ ಅಸ್ವಸ್ಥ ಆದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular