ಬಳ್ಳಾರಿ : ಜನಾರ್ದನ ರೆಡ್ಡಿ ಮನೆ ಮುಂದೆ ಗಲಭೆ, ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಫೈಲ್ಸ್ ಪಡೆದ ಮೊದಲ ದಿನದಿಂದಲೇ ಸಿಐಡಿ ಅಧಿಕಾರಿಗಳಿಂದ ತನಿಖೆ ಚುರುಕುಗೊಂಡಿದೆ.
ಇಂದೂ ಸಹ ತನಿಖೆ ನಡೆಸಲಿರುವ ಸಿಐಡಿ ಟೀಂ. ನಿನ್ನೆ ಹರ್ಷ ಪ್ರಿಯಂವದಾ ನೇತೃತ್ವದ ತಂಡದಿಂದ ಘಟನೆಯ ಇಂಚಿಂಚು ಮಾಹಿತಿ ಸಂಗ್ರಹಿಸಿದ್ದಾರೆ.ರೆಡ್ಡಿ ಮನೆಯಿಂದ ಎರಡು ಕಿಲೋಮೀಟರ್ ವರೆಗೂ ಸಿಸಿಟಿವಿ ಫೂಟೇಜ್ ರಿಕವರಿಗೆ ಸೂಚನೆ ನೀಡಿದ್ದು ರೆಡ್ಡಿ ಮನೆ ಮುಂದೆ ನಡೆದ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಆಕ್ಟ್ ಸೀನ್ ಬಗ್ಗೆ ಮಾಹಿತಿ ಪಡೆದ ಸಿಐಡಿ ಅಧಿಕಾರಿ ಹರ್ಷ ಪ್ರಿಯಂ ರವರು
ನಾಲ್ಕೂ ಎಫ್. ಐ .ಆರ್ ಬಗ್ಗೆ ನಾಲ್ವರು ತನಿಖಾಧಿಕಾರಿಗಳ ಜೊತೆ ಪ್ರತ್ಯೇಕ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದ ಎಲ್ಲ ವಿಡಿಯೋಗಳ ಪರಿಶೀಲನೆ ನಡೆಸಿದ್ದು
ಬಳ್ಳಾರಿಯ ಎಸ್ಪಿ ಸರ್ಕರಲ್ ನಿಂದ ಜನಾರ್ದನ ರೆಡ್ಡಿ ಮನೆ ವರೆಗೂ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯ ಸಿಸಿಟಿವಿ ಫೂಟೇಜ್ ರಿಕವರಿಗೆ ಸೂಚನೆ ನೀಡಿದ್ದಾರೆ.


