ಬಳ್ಳಾರಿ : ಬಸಯ್ಯ ಜಿಎಂ ಗೆಣಿಕೆಹಾಳ್ ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಶ್ರೀ ಜಡೇಶಿದ್ದೇಶ್ವರ ಸೇತುವೆ ಹಳ್ಳದ ದಡದಲ್ಲಿ ದೊಡ್ಡ ಗಾತ್ರದ ಮೊಸಳೆ ಕಂಡು ಬಂದಿದ್ದು ಜನತೆ ಆತಂಕವಾಗಿದ್ದಾರೆ ಗ್ರಾಮದ ರೈತ ಹೊಲದ ಹಳ್ಳದ ದಡದಲ್ಲಿ ಪ್ರತ್ಯಕ್ಷವಾಗಿ ರೈತರು ಜಾನುವಾರ ಮೈತೊಳೆಯಲು ಹೋದಲ್ಲಿ ಕಂಡುಬಂದಿದೆ ಸುಮಾರು 10-ರಿಂದ 12 ಅಡಿ ಉದ್ದವಾಗಿದ್ದು,ದೊಡ್ಡ ಗಾತ್ರವಾಗಿದ್ದು, ಇದರಿಂದ ಹಾಗೂ ನಿತ್ಯ ಕೂಲಿ ಕಾರ್ಮಿಕರು ಹಳ್ಳದ ಪಕ್ಕದಲ್ಲಿ ಹೊಂದಿಕೊಂಡ್ಡಿರುವ ಹೊಲದ ಕೆಲಸ ನೀರಿನಲ್ಲಿ ದಾಟಲು ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಇಲ್ಲಿನ ಜನತೆ ಹಳ್ಳದ ದಡದಲ್ಲಿ ಹಾಗೂ ರೈತರು ಹಗಲು ರಾತ್ರಿ ಹೊಲಗಳಿಗೆ ನೀರು ಹಾಯಿಸಲು ದಡದಲ್ಲಿ ಪಂಪುಸೆಟ್ ಆಳವಡಿಸಿರು ಪೈಪಿನಲ್ಲಿ( ಹಸಿರುಪಾಚು) ಶೇಖರಣೆವಾದ ತೆಗೆಯಲು,ಜನರು ಬಟ್ಟೆಸೆಳೆಯಲು ಹಾಗೂ ಜಾನುವಾರು ನೀರುಕುಡಿಸಲು ಹೊಗಲು ಆತಂಕದಲ್ಲಿದ್ದಾರೆ. ಕೆಲ ಪಂಪು ಸೆಟ್ ರೈತರು ಮೊಸಳೆ ಕಾಟಕ್ಕೆ ಕ್ಷಣದಲ್ಲಿ ಪ್ರಾಣ ಅಪಾಯದಿಂದ ಪಾರದ ಘಟನೆಗಳು ರೈತರು ಆಳಲು ಹೇಳಿರುವ ಸಂಗತಿ ತಿಳಿದು ಬಂದಿದೆ ಹಳ್ಳದ ವ್ಯಾಪ್ತಿಯಲ್ಲಿ 3 ರಿಂದ 5 ಕೀಲೋವರೆಗೆ ಕಾಣುತಲಿದೆ.
ಒಂದೇ ದಿವಸ ಈ ಹಳ್ಳದಲ್ಲಿ ಹಲವು ಕಡೆ ಕಂಡು ಬಂದಿದೆ, ಸುಮಾರು ಮೂರಕ್ಕಿಂತ ಹೆಚ್ಚು ಕಂಡು ಬಂದಿದ್ದು, ಹೇಳುವ ಪ್ರಕಾರ ಮೊಸಳೆ ಮರಿಹಾಕಿದೆ ಎನ್ನಲಾಗಿದೆ. ಶೀಘ್ರವೇ ಸಂಭಂಧಿಸಿದ ಅರಣ್ಯ ಅಧಿಕಾರಿಗಳು ಬೇಟಿನೀಡಿ ಮೊಸಳೆ ಹಿಡಿಯಲು ಮುಂದಾಗಬೇಕಿದೆ ಎಂದು ಸರ್ವಜನಿಕರು ಒತ್ತಾಯಿಸಿದ್ದಾರೆ. ಹಲವು ವರ್ಷದಿಂದ ಮೊಸಳೆ ಕಂಡು ಬಂದರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಹಿಡಿಯಲು ಸರಿಯಾದ ಹಿಡಿಯಲು ಕ್ರಮ ಮಾಡದೇ ನಿರ್ಲಕ್ಷö್ಯವಹಿದ್ದಾರೆ ಎಂದು ರೈತರು ಸರ್ವಜನಿಕರು ದೂರಿದ್ದಾರೆ.
ಮೊಸಳೆ ಬಾಯಿಗೆ ಕುರಿಗಳು: ಹಳ್ಳದ ದಂಡೆಯಲ್ಲಿ ಕುರಿ,ಮೇಕೆ ಮೇಯಲು ಹೋದ ವೇಳೆಯಲ್ಲಿ 3-5 ಮೊಸಳೆ ಬಾಯಿಗೆ ತುತ್ತಾಗಿವೆ ಎಂದು ಪ್ರತ್ಯಕ್ಷವಾಗಿ ಕುರಿಗಾರು ತಿಳಿಸಿದ್ದಾರೆ ಗ್ರಾಪಂ ಆಡಳಿತ ಮಂಡಳಿ ಗಮನಕ್ಕೆ ತಂದರೂ ದೂರು ದುಖ:ಕ್ಕೆ ಕ್ಯಾರೇ ಇಲ್ಲದಂತೆವಾಗಿದೆ ಎಂದು ಗ್ರಾಮಸ್ಶರು ಆರೋಪಿಸಿದ್ದಾರೆ.


