Tuesday, December 3, 2024
Flats for sale
Homeಜಿಲ್ಲೆಬಂಟ್ವಾಳ : ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ,...

ಬಂಟ್ವಾಳ : ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳ್ಳತನ,ಸಿಸಿಟಿವಿಯಲ್ಲಿ ಸೆರೆ…!

ಬಂಟ್ವಾಳ : ದೇವಸ್ಥಾನದ ಹಿಂಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ಮೌಲ್ಯದ ಬೆಳ್ಳಿ, ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ‌ ನಡೆದಿದೆ.

ಪುದುವಿನ ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನ ಪ್ರಕರಣ ನಡೆದಿದೆ. ದೇವಸ್ಥಾನದ ಬಾಗಿಲು ಮುರಿದು ದೇವರ ಗರ್ಭಗುಡಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದಾರೆ.ಮೂವರು ಕಳ್ಳರ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗರ್ಭಗುಡಿಯೊಳಗೆ ನುಗ್ಗಿ ದೇವರ ಬೆಳ್ಳಿಯ ಪೀಠ ಹಾಗೂ ಬಂಗಾರದ ವಸ್ತುಗಳನ್ನು ತೆಗೆದು ಹೊರತಂದು ಗೋಣಿಯಲ್ಲಿ ತುಂಬಿದ ಆಗಂತುಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋಣಿ ಹೆಗಲಿಗೇರಿಸಿ ಹೋಗುತ್ತಿರವ ಆಗಂತುಕರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೂರಾರು ವರ್ಷ ಹಳೆಯದಾದ ಸುಮಾರು ಒಂದೂವರೆ ಕೇಜಿ ತೂಕದ ದೇವರ ಬೆಳ್ಳಿಯ ಪೀಠ, ಚಿನ್ನದ ಮೂಗುತಿ, ದೇವರಿಗೆ ಸಂಬಂಧಿಸಿದ ಕೊಡ, 2 ಕೆಜಿ ತೂಕದ ಬೆಳ್ಳಿಯ ಆಭರಣಗಳು ಹಾಗೂ 3 ಪವನ್ ತೂಕದ ಚಿನ್ನದ ಆಭರಣ ಕಳ್ಳತನವಾಗಿದೆ.

ಅಕ್ಟೋಬರ್ 4ರ ಸೋಮವಾರ ಈ ಘಟನೆ ನಡೆದಿದೆ. ಮೂವರು ಆಗಂತುಕರು ದೇವಸ್ಥಾನದ ಹಿಂಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದಾರೆ. ದೇವಸ್ಥಾನದೊಳಗೆ ಸುತ್ತಾಡಿ ಗರ್ಭಗುಡಿಯೊಳಗೆ ನುಗ್ಗಿ ದೇವರ ಬೆಳ್ಳಿಯ ಪೀಠ ಹಾಗೂ ಚಿನ್ನದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿದ್ದಾರೆ. ಕಳ್ಳರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ದೇವಸ್ಥಾನದ ಅರ್ಚಕರ ಮನೆಯ ಸಾಕುನಾಯಿ ಜೋರಾಗಿ ಬೊಗಳಲಾರಂಭಿಸಿದೆ. ಅದನ್ನು ನೋಡಿದ ಅರ್ಚಕರು ಹೊರಬಂದು ನೋಡಿದಾಗ ಮುಸುಕುಧಾರಿಗಳು ಕಂಡಿದ್ದಾರೆ.ಕೈಯಲ್ಲಿ ಮಾರಕಾಸ್ತ್ರ ಇರುವುದರಿಂದ ಅರ್ಚಕರು ಪ್ರಾಣಭಯದಿಂದ ತಪ್ಪಿಸಿಕೊಂಡಿದ್ದಾರೆ .ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪತಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular