Monday, October 20, 2025
Flats for sale
Homeಜಿಲ್ಲೆಬಂಟ್ವಾಳ : ವೆಬ್ ನ್ಯೂಸ್ ಚಾನಲ್ ನಲ್ಲಿ ಕರಾವಳಿ ಮತ್ತೆ ಉದ್ವಿಗ್ನ ವೆಂದು ಸುಳ್ಳು ಸುದ್ದಿ...

ಬಂಟ್ವಾಳ : ವೆಬ್ ನ್ಯೂಸ್ ಚಾನಲ್ ನಲ್ಲಿ ಕರಾವಳಿ ಮತ್ತೆ ಉದ್ವಿಗ್ನ ವೆಂದು ಸುಳ್ಳು ಸುದ್ದಿ ಪ್ರಸಾರ : BNS ಕಾಯ್ದೆಯಡಿ ಪ್ರಕರಣ ದಾಖಲು …!

ಬಂಟ್ವಾಳ : ಇತ್ತೀಚ್ಚಿಗೆ ವೆಬ್ಸೈಟ್ ಚಾನಲ್ ನಲ್ಲಿ ವೇಗವಾಗಿ ಸುಳ್ಳು ಸುದ್ದಿ ಬಿತ್ತರಿಸುವುದು ಒಂದು ಟ್ರೆಂಡ್ ಆಗಿದೆ. ಯಾವುದೇ ಗಲಭೆಯಾಗಲಿ, ಯಾವುದೇ ವಿಚಾರವಾಗಲಿ ಸುದ್ದಿ ಬಿತ್ತರಿಸುವ ಮುನ್ನ ನೂರು ಬಾರಿ ಆಲೋಚನೆ ಮಾಡಬೇಕಾಗಿದೆ ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿಂದ ಉದ್ವಿಗ್ನ ವಾತಾವರಣ ಉಂಟಾಗಿದ್ದು ಈ ಹಿನ್ನೆಲೆ ಜಿಲ್ಲೆ ಹಾಗೂ ನಗರದ ಪೊಲೀಸ್ ವರಿಷ್ಠರನ್ನು ವರ್ಗಾವಣೆಮಾಡಿ ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸರಕಾರ ಖಡಕ್ ಅಧಿಕಾರಿಗಳನ್ನು ಜಿಲ್ಲೆಗೆ ನೇಮಿಸಲಾಗಿತ್ತು. ಹಾಗೂ ಜಿಲ್ಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಹತೋಟಿಗೆ ತರಲು ಇಲಾಖೆ ಹಲವು ಕಠೀಣ ಕ್ರಮಗಳನ್ನು ಸೂಚಿಸಲಾಗಿತ್ತು.

ಅದರಂತೆಯೇ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ:73/2025 ಕಲಂ: 125 ಬಿ ಎನ್ ಎಸ್ ಪ್ರಕರಣಕ್ಕೆ ‌ಸಂಬಂಧಿಸಿದಂತೆ, Gadinadadhwani. online ಎಂಬ ವೆಬ್ ನ್ಯೂಸ್ ಚಾನಲ್ ವೊಂದರಲ್ಲಿ “ಕರಾವಳಿಯಲ್ಲಿ ಮತ್ತೆ ಮುಂದುವರಿದ ತಲವಾರು ದಾಳಿ, ಸಜೀಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ” ಎಂಬ ತಲೆಬರಹವಿರುವ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಸದ್ರಿ ಸುಳ್ಳುಸುದ್ದಿಯನ್ನು ಪ್ರಸಾರ ಮಾಡಿ, ಸಾರ್ವಜನಿಕ ವಲಯದಲ್ಲಿ ಭಯ ಬೀತಿಯನ್ನುಂಟು ಮಾಡಿದ ವೆಬ್ ನ್ಯೂಸ್ ಚಾನಲ್ ವಿರುದ್ಧ ದಿನಾಂಕ: 24.06.2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 80/2025, ಕಲಂ; 240 BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮುಂದಿನ ದಿನಗಳಲ್ಲೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular