ಬಂಟ್ವಾಳ ; ಲಾರಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ವಿದ್ಯಾರ್ಥಿ ಸೇರಿದಂತೆ ಎಂಟು ಮಂದಿ ಗಾಯಗೊಂಡಿರುವ ಘಟನೆ ವಗ್ಗದ ಕಾಡಬೆಟ್ಟು ಕ್ರಾಸ್ ಬಳಿ ಬುಧವಾರ ನಡೆದಿದೆ.
ಬಸ್ ಚಾಲಕ ಉಮೇಶ್, ಪ್ರಯಾಣಿಕರಾದ ನಳಿನಿ, ರಕ್ಷಣಾ ವೇಣುಗೋಪಾಲ್, ತಾರಾನಾಥ್, ರೋಹಿಣಿ ಮತ್ತು ಲಾರಿ ಚಾಲಕ ಚಿತ್ರದುರ್ಗದ ಮಹೇಶ್ ಗಾಯಗೊಂಡಿದ್ದಾರೆ.
ಕಾರಿಂಜ ಕಾಡಬೆಟ್ಟು ಎಂಬಲ್ಲಿ ಅತಿಯಾಗಿ ವೇಗದಲ್ಲಿದ ಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಬಂಟ್ವಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.