ಬಂಟ್ವಾಳ : ತಾಲೂಕಿನ ಪುಣಚ ಗ್ರಾಮದ ಪರಿಯಲ್ತಡ್ಕ ಎಂಬಲ್ಲಿ ವ್ಯಕ್ತಿಯೋರ್ವರು ಕಾಲು ಸೇತುವೆಯಿಂದ ಜಾರಿ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿ ಕೇಶವ ನಾಯಿಕ ಎಂದು ತಿಳಿದುಬಂದಿದೆ. ಕೇಶವ ಪರಿಯಾಲತಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತನ್ನ ಮನೆಯನ್ನು ತಲುಪಲು ಮಳೆಗಾಲದಲ್ಲಿ ನೀರು ಹರಿಯುವ ತೋಡಿಗೆ ಅಡ್ಡಲಾಗಿ ನಿರ್ಮಿಸಲಾದ ಕಾಲು ಸೇತುವೆಯನ್ನು ದಾಟಬೇಕು. ಸಮತೋಲನ ತಪ್ಪಿದ ಕಾರಣ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.