ಬಂಟ್ವಾಳ : ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಪತ್ನಿಸೀಮಂತದ ತಯಾರಿಯಲ್ಲಿ ನಿರತನಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ವಿಟ್ಲ ಬಳಿಯ ಕನ್ಯಾನದಲ್ಲಿ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಮೃತರನ್ನು ಕನ್ಯಾನದ ಮಿತ್ತನಡ್ಕ ನಿವಾಸಿ ಮತ್ತು ಪಿಕಪ್ ವಾಹನ ಚಾಲಕ ಸತೀಶ್ (33) ಎಂದು ಗುರುತಿಸಲಾಗಿದೆ. ಅವರ ಪತ್ನಿಯಸೀಮಂತ ಸಂಭ್ರಮ ಇಂದು 23 ರ ಶುಕ್ರವಾರ ಮದ್ಯಾನ ನಡೆದಿತ್ತು ಎಲ್ಲ ಕಾರ್ಯಕ್ರಮ ಮುಗಿಸಿ ಊಟ ಮಾಡುವ ಸಂದರ್ಭದಲ್ಲಿ ಪತಿ ಮೃತಪಟ್ಟ ವಿದ್ರಾವಕ ಘಟನೆ ನಡೆದಿದೆ.
ಶುಕ್ರವಾರ ಮನೆಯಲ್ಲಿ ಸತೀಶ್ ಕುಸಿದು ಬಿದ್ದು ಸಾವನ್ನಪ್ಪಿದ್ದು, ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇನ್ನೇನು ಪತ್ನಿಯ ಸೀಮಂತದ ಸಂದರ್ಭದಲ್ಲಿ ಸಂತೋಷದಿಂದ ತುಂಬಿದ್ದ ಮನೆ ಈಗ ಶೋಕದಲ್ಲಿ ಮುಳುಗಿದ್ದು ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.