ಬಂಟ್ವಾಳ : ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಂಚಿನಡ್ಕಪದವು ಚಟ್ಟೆಕ್ಕಲ್ ನಿವಾಸಿಗಳಾದ ಅಬ್ದುಲ್ ರೆಹಮಾನ್ ಮತ್ತು ಹಳಿಯಮ್ಮ ಎಂಬವರ ಹಿರಿಯ ಪುತ್ರ ಫಹಾದ್ (24) ಡಿ.6ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಫಹಾದ್ ತನ್ನ ಬಾಸ್‌ನ ಮಗನನ್ನು ರೆಸಾರ್ಟ್‌ನಲ್ಲಿ ಬಿಟ್ಟು ಹಿಂತಿರುಗುತ್ತಿದ್ದಾಗ ಕಾರು ಪಲ್ಟಿಯಾಗಿ ಅವರಿಗೆ ಗಂಭೀರ ಗಾಯಗಳಾಗಿವೆ. ಐದು ತಿಂಗಳ ಹಿಂದೆಯಷ್ಟೇ ಫಹಾದ್ ಡ್ರೈವರ್ ವೀಸಾದ ಮೇಲೆ ಕತಾರ್‌ಗೆ ಹೋಗಿದ್ದ.
ಈ ಹಿಂದೆ ಸೌದಿ ಅರೇಬಿಯಾದಲ್ಲಿ ಚಾಲಕನಾಗಿ ಉದ್ಯೋಗದಲ್ಲಿದ್ದ ಅವರು ಕರೋನಾ ಸಾಂಕ್ರಾಮಿಕ ಸಮಯದಲ್ಲಿ ತವರು ಮನೆಗೆ ಬಂದಿದ್ದರು. ಒಂದು ವರ್ಷದಿಂದ ಇಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ಅವರು ತಮ್ಮ ಕುಟುಂಬ ಸದಸ್ಯರಿಗೆ ದೂರವಾಣಿ ಕರೆ ಮಾಡಿದ್ದರು. ಅವರ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಅಬ್ದುಲ್ ರೆಹಮಾನ್ ಅವರ ಇಬ್ಬರು ಪುತ್ರರಲ್ಲಿ ಅವರು ಹಿರಿಯ ಮಗ. ಇವರ ಕಿರಿಯ ಸಹೋದರ ಶಾರದ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ.
ಅವರ ತಾಯಿ ಪಾಣೆಮಂಗಳೂರಿನ ಬಂಗ್ಲೆ ಗುಡ್ಡೆಯವರು. ಅವರ ತಂದೆ ಅಬ್ದುಲ್ ರೆಹಮಾನ್ ಸಜಿಪ ಮೂಲದವರು. ಫಹಾದ್ ಅವರ ಪಾರ್ಥಿವ ಶರೀರ ಇಂದು ಅಥವಾ ನಾಳೆ ತವರು ಮನೆಗೆ ತಲುಪುವ ನಿರೀಕ್ಷೆಯಿದೆ. ಅವರ ಅಂತಿಮ ಸಂಸ್ಕಾರವು ಸಜಿಪ ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.