Saturday, March 14, 2026
Flats for sale
Homeಜಿಲ್ಲೆಬಂಟ್ವಾಳ : ಏಕಾಏಕಿ ಮುಂದಕ್ಕೆ ಚಲಿಸಿದ ಮಿನಿ ಗೂಡ್ಸ್‌ ಟೆಂಪೋ,ಆಟವಾಡುತ್ತಿದ್ದ ಮಗು ಚಕ್ರದಡಿಗೆ ಸಿಲುಕಿ ಮೃತ್ಯು.!

ಬಂಟ್ವಾಳ : ಏಕಾಏಕಿ ಮುಂದಕ್ಕೆ ಚಲಿಸಿದ ಮಿನಿ ಗೂಡ್ಸ್‌ ಟೆಂಪೋ,ಆಟವಾಡುತ್ತಿದ್ದ ಮಗು ಚಕ್ರದಡಿಗೆ ಸಿಲುಕಿ ಮೃತ್ಯು.!

ಬಂಟ್ವಾಳ : ಬಂಟ್ವಾಳ ತಾಲೂಕಿನ ಲೋರೆಟ್ಟೊ ಪದವಿನ ಟಿಪ್ಪು ನಗರದ ಬಳಿ ಮಿನಿ ಗೂಡ್ಸ್‌ ಟೆಂಪೋವೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿ ಆಟವಾಡುತ್ತಿದ್ದ ಮೂರರ ಹರೆಯದ ಮಗು ಟೆಂಪೋ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.ಮೂರು ವರುಷದ ಹಿಂದೆ ಫರಂಗಿ‌ಪೇಟೆಯ ಹೆದ್ದಾರಿಯಲ್ಲಿ ನಡೆದ ಅಪಘಾತವೊಂದರಲ್ಲಿ ಈ ಮಗುವಿನ ತಂದೆ ತೀರಿಹೋಗಿದ್ದರು ಇದೀಗ ಈ ಪುಟ್ಟ ಮಗು ದಾರುಣ ಸಾವನ್ನಪ್ಪಿದ್ದು ಕುಟುಂಬಸ್ಥರಿಗೆ ದಿಗಿಲುಬಡಿದಂತಾಗಿದೆ.

ಅಜ್ಜನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಹತ್ತಿರದಲ್ಲೇ ನಿಲ್ಲಿಸಿದ್ದ ಟೆಂಪೋ ಅನಿರೀಕ್ಷಿತವಾಗಿ ಮುಂದಕ್ಕೆ ಚಲಿಸಿದ್ದು ಅಲ್ಲೇ ಆಟವಾಡುತ್ತಿದ್ದ. ಆಶಿಕಾಳ ಮೇಲೆ ಟಯರ್ ಹರಿದಿದೆ, ಕುತ್ತಿಗೆ ಭಾಗಕ್ಕೆ ಹೆಚ್ಚು ಗಾಯ ವಾಗಿದ್ದರಿಂದ ಮಗು ಸ್ಥಳದಲ್ಲಿ ಪ್ರಾಣ ಕಳೆದು ಕೊಂಡಿದೆ.ಘಟನೆಯಲ್ಲಿ ಗಂಭೀರ ಗಾಯಗೊಂಡ ಮಗುವನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular